ವಿಶ್ವದ ನಂ.1 ಟಿ20 ಬೌಲರ್ ನನ್ನೇ ಐಪಿಎಲ್ ನಲ್ಲಿ ಕೇಳೋರಿಲ್ಲ!

ಮಂಗಳವಾರ, 21 ಫೆಬ್ರವರಿ 2017 (10:21 IST)
ಬೆಂಗಳೂರು: ಐಪಿಎಲ್ ಬಿಡ್ಡಿಂಗ್ ನಲ್ಲಿ ಗೆಲ್ಲುವ ಕುದುರೆಗಳಿಗೆ ಮಾತ್ರ ಬೆಲೆ. ಹಿಂದಿನ ದಾಖಲೆಗಳು ಲೆಕ್ಕಕ್ಕಿಲ್ಲ ಎನ್ನುವುದು ಈ ಬಿಡ್ಡಿಂಗ್ ನಲ್ಲೂ ಸಾಬೀತಾಗಿದೆ.

 
ವಿಶೇಷವೆಂದರೆ ಈ ಬಾರಿಯ ವಿಶ್ವ ಟಿ20 ಶ್ರೇಯಾಂಕದಲ್ಲಿ ನಂ.1 ಬೌಲರ್ ಎನಿಸಿಕೊಂಡಿರುವ ದ. ಆಫ್ರಿಕಾ ಬೌಲರ್ ಇಮ್ರಾನ್ ತಾಹಿರ್ ಮಾರಾಟವಾಗಲೇ ಇಲ್ಲ. ಯಾವುದೇ ತಂಡಗಳು ಇವರನ್ನು ಕೊಳ್ಳುವ ಆಸಕ್ತಿಯೇ ತೋರಲಿಲ್ಲ.

ರಾಜ್ಯದ ಕೆ. ಗೌತಮ್ ಸೇರಿದಂತೆ 11 ಕ್ರಿಕೆಟಿಗರು ಇನ್ನೂ ಅಂತಾರಾಷ್ಟ್ರೀಯ ಪಂದ್ಯವೇ ಆಡದಿದ್ದರೂ, ದೊಡ್ಡ ಮೊತ್ತಕ್ಕೆ ವಿವಿಧ ತಂಡಗಳ ಪಾಲಾಗಿದ್ದಾರೆ. ಟಾಪ್ 5 ಪಟ್ಟಿಯಲ್ಲಿ ಇರುವವರೆಲ್ಲರೂ ಬೌಲರ್ ಗಳೇ.

2 ಕೋಟಿ ಮೂಲ ಬೆಲೆ ಹೊಂದಿದ್ದರೂ ಭಾರತದ ಇಶಾಂತ್ ಶರ್ಮಾರನ್ನು ಮಾರಾಟವಾಗದೇ ಉಳಿದರು. ವಿದೇಶೀ ಆಟಗಾರರ ಪೈಕಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ 1.50 ಕೋಟಿ ರೂ. ಮೂಲಧನ ಹೊಂದಿದ್ದರು. ಅವರೂ ಮಾರಾಟವಾಗದೇ ಉಳಿದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (ಮೂಲ ಬೆಲೆ 50 ಲಕ್ಷ), ಇರ್ಫಾನ್ ಪಠಾಣ್ (ಮೂಲ ಬೆಲೆ 50 ಲಕ್ಷ) ಮಾರಾಟವಾಗದೇ ಉಳಿದ ಇತರ ಭಾರತೀಯ ಆಟಗಾರರು.

ವಿದೇಶೀ ಆಟಗಾರರ ಪೈಕಿ ಕೈಲ್ ಅಬೋಟ್, ಬ್ರ್ಯಾಡ್ ಹಾಡಿನ್ ಕೂಡಾ ಯಾವುದೇ ತಂಡಕ್ಕೆ ಮಾರಾಟವಾಗದೇ ಉಳಿದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ