ವೃದ್ಧಿಮಾನ್ ಸಹಾ‌ಗೆ ಟೆಸ್ಟ್ ವಿಕೆಟ್‌ಕೀಪರ್‌ ಅರ್ಹತೆ : ವಿರಾಟ್ ಕೊಹ್ಲಿ

ಮಂಗಳವಾರ, 28 ಏಪ್ರಿಲ್ 2015 (19:03 IST)
ಮಹೇಂದ್ರ ಸಿಂಗ್ ಧೋನಿ ಬದಲಿಯಾಗಿ ವಿಕೆಟ್ ಕೀಪರ್ ತರುವುದು ಟೆಸ್ಟ್ ತಂಡಕ್ಕೆ ಕಷ್ಟ. ಆದರೆ ತಮ್ಮ ಪ್ರಕಾರ ಮುಂದಿನ 5ರಿಂದ 6 ವರ್ಷಗಳವರೆಗೆ ವೃದ್ಧಿಮಾನ್ ಸಹಾ ಅವರೇ ಟೆಸ್ಟ್ ತಂಡಕ್ಕೆ ವಿಕೆಟ್ ಕೀಪರ್ ಆಗುವ ಯೋಗ್ಯತೆ ಹೊಂದಿದ್ದಾರೆ ಎಂದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. 
 
ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಸ್ಟಂಪ್ ಹಿಂದೆ ಧೋನಿಯನ್ನು ಬದಲಿಗೆ ಯಾರು ಸೂಕ್ತ ವಿಕೆಟ್ ಕೀಪರ್ ಎಂದು ಪ್ರಶ್ನಿಸಿದಾಗ ಕೊಹ್ಲಿ ಬಂಗಾಳದ ಸ್ಟಂಪರ್ ಪರ ಬ್ಯಾಟ್ ಮಾಡಿದರು.
 
 ಧೋನಿ ಬದಲಿಗೆ ಯಾರನ್ನಾದರೂ ತರುವುದು ದೊಡ್ಡ ಸವಾಲಿನ ಕೆಲಸ. ನಾನು ಅವರಿಂದ ತುಂಬಾ ಕಲಿತೆ. ಆದರೆ ಧೋನಿಗೆ ಬದಲಿಯಾಗಿ ವಿಕೆಟ್ ಕೀಪರ್‌ಗೆ ಸಂಬಂಧಿಸಿದಂತೆ ಸಹಾ, ದಿನೇಶ್ ಕಾರ್ತಿಕ್, ಪಾರ್ತಿವ್ ಪಟೇಲ್ ಮತ್ತು ಸಂಜು ಸ್ಯಾಮ್ಸನ್ ಮುಂತಾದ ಕೀಪರ್‌ಗಳು ಇದ್ದಾರೆ ಎಂದು ಪ್ರಚಾರ ಸಮಾರಂಭದಲ್ಲಿ ಕೊಹ್ಲಿ ಹೇಳಿದರು. 
 ಆದರೆ ನನ್ನನ್ನು ವೈಯಕ್ತಿಕವಾಗಿ ಕೇಳಿದರೆ ವೃದ್ಧಿಮಾನ್ ಸಹಾ ಅದಕ್ಕೆ ಅರ್ಹತೆ ಪಡೆದಿದ್ದಾರೆ.

ಅವರು ವಿಶ್ವದರ್ಜೆಯ ಕ್ರಿಕೆಟರ್ ಆಗಿದ್ದಾರೆ. ಅವರಿಗೀಗ 30 ವರ್ಷಗಳಾಗಿದ್ದು, ಮುಂದಿನ 5-6 ವರ್ಷಗಳ ಕಾಲ ಟೀಂ ಇಂಡಿಯಾದ ಕೀಪರ್ ಆಗಿರಲು ಅರ್ಹತೆ ಪಡೆದಿದ್ದಾರೆ ಎಂದು ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಿದರು. 
 

ವೆಬ್ದುನಿಯಾವನ್ನು ಓದಿ