ಯುವರಾಜ್ ಸಿಂಗ್ ಇನ್ನಿಂಗ್ಸ್‌ನಿಂದ ಸನ್ ರೈಸರ್ಸ್‌ಗೆ ಗೆಲುವು: ಆಕಾಶ್ ಚೋಪ್ರಾ

ಗುರುವಾರ, 26 ಮೇ 2016 (11:58 IST)
ಸನ್ ರೈಸರ್ಸ್ ಹೈದರಾಬಾದ್ ರನ್ ಗತಿಯನ್ನು ಹೆಚ್ಚಿಸಲು ತಿಣುಕಾಡುತ್ತಿರುವ ಸಂದರ್ಭದಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಯುವರಾಜ್ ಸಿಂಗ್ ಆಡಲಿಳಿದರು. ಎಡ ಗೈ ಆಟಗಾರನ ಬಿರುಸಿನ ಆಟವು ಎಸ್‌ಆರ್‌ಎಚ್ ಅದೃಷ್ಟವನ್ನು ಬದಲಾಯಿಸಿ ಗೆಲುವನ್ನು ಗಳಿಸಿತು ಎಂದು ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.  

ಡೇವಿಡ್ ವಾರ್ನರ್ ಮತ್ತು ಮಾಯ್ಸಿಸ್ ಹೆನ್ರಿಕ್ಸ್ ಸತತ ಎಸೆತಗಳಲ್ಲಿ ಔಟಾಗಿ ಸನ್ ರೈಸರ್ಸ್ ತಂಡ 71ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಯುವಿ ಅವರ 30 ಎಸೆತಗಳ 44 ರನ್ ಕೆಕೆಆರ್‌ನಿಂದ ಗೆಲುವನ್ನು ಕಸಿದುಕೊಂಡಿತು ಎಂದು ಅವರು ವಿಶ್ಲೇಷಿಸಿದರು. 
 
 ಯುವರಾಜ್ ಸಿಂಗ್ ಕೆಕೆಆರ್ ವಿರುದ್ಧ ತಮ್ಮ ಹಿಂದಿನ ಆಟಕ್ಕೆ ಮರಳಿದರು. ಅವರದ್ದು ಪಂದ್ಯದ ದಿಕ್ಕನ್ನು ಬದಲಾಯಿಸಿದ ಇನ್ನಿಂಗ್ಸ್ ಎಂದು ಚೋಪ್ರಾ ಹೇಳಿದರು. ಯುವಿ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಮತ್ತು ಒಂದು ಸಿಕ್ಸ್ ಸೇರಿದ್ದು ಅವರ ಪವರ್ ಹಿಟ್ಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದು, ಅಂತಾರಾಷ್ಟ್ರೀಯ ರಂಗದಲ್ಲಿ ಅವರನ್ನು ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಲಾಗಿದೆ.
 
 ಯುವರಾಜ್ ಅವರ ಬ್ಯಾಟಿಂಗ್ ಜತೆಗೆ ಬಾಂಗ್ಲಾದ ಮುಸ್ತಫಿಜುರ್ ರೆಹ್ಮಾನ್ ಮತ್ತು ಭುವನೇಶ್ವರ್ ಕುಮಾರ್ ಅವರ ಮನೋಜ್ಞ ಬೌಲಿಂಗ್ ಪ್ರದರ್ಶನವೂ ಸೇರಿಕೊಂಡಿತು. ಅವರ ಡೆತ್ ಬೌಲಿಂಗ್ ಕೌಶಲ್ಯ ಕೊಲ್ಕತ್ತಾ ಬ್ಯಾಟಿಂಗ್‌ ಶಕ್ತಿಯನ್ನು ಕುಗ್ಗಿಸಿ ಸನ್ ರೈಸರ್ಸ್‌ಗೆ 22 ರನ್‌ಗಳಿಂದ ಗೆಲುವನ್ನು ಒಪ್ಪಿಸಿತು. 
 
 ಭುವನೇಶ್ವರ್ ಮತ್ತು ಮುಸ್ತಫಿಜುರ್ ಅತ್ಯಂತ ಉತ್ತಮ ಡೆತ್ ಬೌಲಿಂಗ್ ಜೋಡಿ ಎಂದು ಚೋಪ್ರಾ ಉದ್ಗರಿಸಿದರು.  ರಸೆಲ್ ಅನುಪಸ್ಥಿತಿ ಕೂಡ ನೈಟ್ ರೈಡರ್ಸ್‌ಗೆ ಭಾರಿ ಹಿನ್ನಡೆಯಾಗಿದ್ದು,ತಂಡದಲ್ಲಿ ಆರ್. ಸತೀಶ್‍ಗೆ ಸ್ಥಾನ ನೀಡುವ ಗಂಭೀರ್ ನಿರ್ಧಾರವನ್ನು ಟೀಕಿಸಿದರು. ಸತೀಶ್ ಅವರನ್ನು ಸೇರಿಸಿಕೊಂಡಿದ್ದು ತಿರುಗೇಟು ನೀಡಿತು. ಗಂಭೀರ್ ಶೆಲ್ಡನ್ ಜಾಕ್ಸನ್ ಅವರನ್ನು ಆಡಿಸಬಹುದಿತ್ತು ಎಂದು ಚೋಪ್ರಾ ಪ್ರತಿಕ್ರಿಯಿಸಿದರು. 
 
ಸನ್ ರೈಸರ್ಸ್ ಗುಜರಾತ್ ಲಯನ್ಸ್ ತಂಡವನ್ನು ಅಕ್ಷರಶಃ ಸೆಮಿಫೈನಲ್‌ನಲ್ಲಿ ಎದುರಿಸಲಿದ್ದು, ವಿಜೇತರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಭಾನುವಾರದ ಫೈನಲ್ಸ್‌ನಲ್ಲಿ ಎದುರಿಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ