ಆರ್ಥಿಕ ಕುಸಿತ: ಮಿತ್ತಲ್‌ಗೆ 16 ಬಿಲಿಯನ್ ಪೌಂಡ್ಸ್ ನಷ್ಟ

ಜಾಗತಿಕ ಶೇರುಪೇಟೆ ಕುಸಿತದಿಂದಾಗಿ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ಕೇವಲ 120 ದಿನಗಳಲ್ಲಿ 16 ಬಿಲಿಯನ್ ಪೌಂಡ್‌ಗಳ ನಷ್ಟ ಅನುಭವಿಸಿದ್ದಾರೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ.

ಟೈಮ್ಸ್ ಮ್ಯಾಗ್‌ಜಿನ್ 2008ರ ಶ್ರೀಮಂತರ ಪಟ್ಟಿಯಲ್ಲಿ ಮಿತ್ತಲ್ 27.7 ಬಿಲಿಯನ್ ಆಸ್ತಿಯನ್ನು ಹೊಂದಿದ್ದು, ಜೂನ್ ತಿಂಗಳಲ್ಲಿ ಕುಸಿತಗೊಂಡ ಶೇರುಪೇಟೆಯ ಹಿನ್ನೆಲೆಯಲ್ಲಿ 16.63 ಬಿಲಿಯನ್ ಪೌಂಡ್‌ಗಳ ನಷ್ಟ ಅನುಭವಿಸಿದ್ದಾರೆ. ಆದರೂ ಅವರು ಬ್ರಿಟನ್‌ನ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್‌ಫೋನ್ ವೇರ್‌ಹೌಸ್ ಸಹ ಸಂಸ್ಥಾಪಕರಾದ ಚಾರ್ಲ್ಸ್ ಡನ್‌ಸ್ಟೋನ್ ಮತ್ತು ಡೇವಿಡ್ ರೋಸ್ 1.1 ಬಿಲಿಯನ್ ಪೌಂಡ್‌ಗಳಷ್ಟು ಹಾನಿಯನ್ನು ಅನುಭವಿಸಿದ್ದಾರೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ಡೈಲಿ ಮೇಲ್ ಮತ್ತು ಜನರಲ್ ಟ್ರಸ್ಟ್‌ನ ಅಧ್ಯಕ್ಷರಾದ ಲಾರ್ಡ್ ರೊಧ್‌ಮೆರೆ ಜಾಹೀರಾತು ಆದಾಯದಲ್ಲಿ 707 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಶೇರುಪೇಟೆಯ ತಜ್ಞರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ