ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿಲ್ಲ-ಆರ್ ಬಿಐ ಸ್ಪಷ್ಟನೆ

ಶನಿವಾರ, 19 ಅಕ್ಟೋಬರ್ 2019 (09:28 IST)
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಸಾವಿರ ರೂಪಾಯಿ ನೋಟು ಅಸಲಿ ಅಲ್ಲ  ನಕಲಿ ಎಂದು  ಆರ್ ಬಿಐ ತಿಳಿಸಿದೆ.2000 ರೂಪಾಯಿಯ ಮುದ್ರಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಆರ್ ಬಿಐ ಸಾವಿರ ರೂಪಾಯಿಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರ ರೂಪಾಯಿ ನೋಟಿನ ಫೋಟೊವೊಂದು ಹರಿದಾಡುತ್ತಿದ್ದು, ಆರ್ ಬಿಐ ಬಿಡುಗಡೆ ಮಾಡಿರುವುದಾಗಿ ತಿಳಿಸಲಾಗಿದೆ.


ಆದರೆ ಈ ಫೋಟೊಗಳು ನಕಲಿಯಾಗಿದ್ದು, ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿಲ್ಲ ಎಂದು    ಆರ್ ಬಿಐ ಸ್ಪಷ್ಟಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ