200 ರೂ. ನೋಟು ಬಿಡುಗಡೆ: ಎಟಿಎಂಗಳಲ್ಲಿ ಸದ್ಯ ಸಿಗಲ್ಲ

ಶುಕ್ರವಾರ, 25 ಆಗಸ್ಟ್ 2017 (13:00 IST)
ರಿಸರ್ವ್ ಬ್ಯಾಂಕ್ ಇಂಡಿಯಾ ಗೋಷಿಸಿದಂತೆ ಇಂನಿಂದ 200 ರೂ. ಮುಖಬೆಲೆಯ ನೋಟುಗಳನ್ನ ಚಲಾವಣೆಗೆ ತರುತ್ತಿದೆ. ಹೊಸ ನೋಟಿನ ಆಸೆಯಲ್ಲಿ ಎಟಿಎಂಗೆ ಹೋದರೆ ನಿರಾಸೆಯಾಗಬಹುದು.  

ಯಾಕೆಂದರೆ, ದೇಶದ ಬಹುತೇಕ ಕಡೆ ಇವತ್ತು ಸರ್ಕಾರಿ ರಜೆ ಇರುವುದರಿಂದ ಬ್ಯಾಂಕ್`ಗಳಿಗೆ ಹೊಸ ನೋಟುಗಳ ಸರಬರಾಜು ಆಗಿರುವುದಿಲ್ಲ. ಆದರೂ ಗಣೇಶ ಹಬ್ಬದ ವಿಶೇಷ ದಿನ ಹೊಸ ನೋಟನ್ನ ಲಾಂಚ್ ಮಾಡಲಾಗುತ್ತಿದೆ. ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಎಟಿಎಂ ಮೆಶಿನ್ ಇರುವುದರಿಂದ ಅವುಗಳನ್ನ ರೀಕ್ಯಾಲಿಬ್ರೇಟ್ ಮಾಡಬೇಕಿದೆ. ಹೀಗಾಗಿ, ಕೊನೆ ಪಕ್ಷ ಹೊಸ ನೋಟು ಎಟಿಎಂಗಳಲ್ಲಿ ಸಿಗಲು ಒಂದು ವಾರವಾದರೂ ಬೇಕಿದೆ, ಬ್ಯಾಂಕ್`ಗಳಲ್ಲಿ ಎರಡ್ಮೂರು ದಿನಗಳಲ್ಲಿ ಹೊಸ ನೋಟು ಸಿಗಬಹುದು.
ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಸಹಿ ಜೊತೆ ಸಾಂಚಿ ಸ್ತೂಪದ ಚಿತ್ರ, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರದ ವಿಶಿಷ್ಟ ಲಕ್ಷಣದ ಜೊತೆ ಬ್ರೈಟ್ ಹಳದಿ ಬಣ್ಣ ಒಳಗೊಂಡಿರುತ್ತದೆ.

ಕಳೆದ ಮಾರ್ಚ್ ತಿಂಗಳಲ್ಲೇ ಹಣಕಾಸು ಇಲಾಖೆಯ ಅನುಮತಿ ಪಡೆದು ರಿಸರ್ವ್ ಬ್ಯಾಂಕ್ 200 ರೂ. ನೋಟು ಬಿಡುಗಡೆಗೆ ಸಿದ್ಧತೆ ನಡೆಸಿದೆ. ನೋಟಿನಲ್ಲಿ ಹಲವು ಭದ್ರತಾ ಲಕ್ಷಣಗಳನ್ನ ಒಳಪಡಿಸಲಾಗಿದ್ದು,ಹಲವು ಪರೀಕ್ಷೆಗೆ ಒಳಪಡಿಸಲಾಗಿದೆ.

ನವೆಂಬರ್`ನಲ್ಲಿ ಪ್ರಧಾನಿ ನರೇಂದ್ರಮೊದಿ ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ರಿಸರ್ವ್ ಬ್ಯಾಂಕ್ ಘೋಷಿಸಿದ 4ನೇ ಹೊಸ ನೋಟು ಇದಾಗಿದ್ದು, ನೋಟ್ ಬ್ಯಾನ್ ಬಳಿಕ ಉಂಟಾಗಿರುವ ಚಿಲ್ಲರೆ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ನೀಡಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ