90 Hours: ಇನ್ ಫೋಸಿಸ್ ನಲ್ಲಿ 70 ಗಂಟೆ ಅಂತಾ ಎಲ್ &ಟಿಗೆ ಬಂದೆ, ಇದೇನಾಯ್ತು ಸಿವಾ... (Video)

Krishnaveni K

ಶುಕ್ರವಾರ, 10 ಜನವರಿ 2025 (11:09 IST)
Photo Credit: X
ಬೆಂಗಳೂರು: ಎಷ್ಟು ಹೊತ್ತು ಅಂತ ಹೆಂಡತಿ ಮುಖ ನೋಡಿಕೊಂಡಿರಲು ಸಾಧ್ಯ? ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಎಲ್ &ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್ ಹೇಳಿಕೆ ಈಗ ಭಾರೀ ಟ್ರೋಲ್ ಗೆ ಕಾರಣವಾಗಿದೆ.

ಈ ಹಿಂದೆ ಇನ್ ಫೋಸಿಸ್ ಸಂಸ್ಥಾಪಕ ಎನ್ ನಾರಾಯಣಮೂರ್ತಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಎಲ್ & ಟಿ ಮುಖ್ಯಸ್ಥರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಎಷ್ಟು ಹೊತ್ತು ಅಂತ ಹೆಂಡತಿ ಮುಖ ನೋಡುತ್ತಾ ಕುಳಿತುಕೊಳ್ಳಬಹುದು. ಒಂದು  ವೇಳೆ ಭಾನುವಾರವೂ ಕೆಲಸ ಮಾಡಿಸಲು ಅನುಮತಿ ಇದೆ ಎಂದಾದರೆ ನನಗೆ ಖುಷಿಯಿರುತ್ತಿತ್ತು. ಮನೆಯಲ್ಲಿಯೇ ಕೂತು ಏನು ಮಾಡ್ತೀರಿ? ಎಷ್ಟುಹೊತ್ತು ಅಂತ ಹೆಂಡ್ತಿ ಮುಖ ನೋಡ್ಕೊಂಡು ಕೂತಿರ್ತೀರಿ’ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು.

ಅವರ ಹೇಳಿಕೆ ಈಗ ಸಾಕಷ್ಟು ಟ್ರೋಲ್, ಮೆಮೆಗಳ ಹುಟ್ಟಿಗೆ ಕಾರಣವಾಗಿದೆ. ಒಬ್ಬರು ‘ಇಷ್ಟು ದಿನ ಇನ್ ಫೋಸಿಸ್ ನಲ್ಲಿದ್ದೆ, 70 ಗಂಟೆ ಕೆಲಸ ಅಂದಿದ್ದಕ್ಕೆ ಎಲ್&ಟಿಗೆ ಬಂದೆ. ಇದೇನಾಗಿ ಹೋಯ್ತು ಸಿವಾ’ ಎಂದು ಟ್ರೋಲ್ ಮಾಡಿದ್ದಾರೆ. ಇನ್ನೊಬ್ಬರು ರವಿಚಂದ್ರನ್ ಅಂಜದ ಗಂಡು ಸಿನಿಮಾದಲ್ಲಿ ಹಸಿಮೆಣಸಿನಕಾಯಿ ತಿನ್ನುವ ದೃಶ್ಯವನ್ನು ಹಾಕಿ ಇನ್ ಫೋಸಿಸ್ ನಿಂದ ಎಲ್ & ಟಿಗೆ ಬಂದ ನೌಕರನ ಕತೆ ಎಂದು ಫನ್ ಮಾಡಿದ್ದಾರೆ.

Meanwhile the guy who left Infosys and joined L&T https://t.co/OviP0IGHLd pic.twitter.com/MTh7XLOvqZ

— ನಗಲಾರದೆ... ಅಳಲಾರದೆ... (@UppinaKai) January 9, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ