ಅದಾನಿ ಷೇರು ಕುಸಿತ ದೇಶಕ್ಕೆ ಯಾವುದೇ ನಷ್ಟ ಇಲ್ಲ : ಪಿಯೂಷ್ ಗೋಯಲ್

ಶನಿವಾರ, 4 ಫೆಬ್ರವರಿ 2023 (20:54 IST)
ಗೌತಮ್ ಅದಾನಿ ಪ್ರಕರಣ ಸಂಪುರ್ಣವಾಗಿ ಖಾಸಗಿ ಕಂಪನಿಗೆ ಸೇರಿದ ವಿಷಯವಾಗಿದ್ದು, ಅದಕ್ಕೂ ದೇಶಕ್ಕೂ ಸಂಬಂಧವಿಲ್ಲ, ಹಾಗಾಗಿ ದೇಶದ ಜನತೆ ಕಳವಳಗೊಳ್ಳಬೇಕಿಲ್ಲ, ಎಸ್ಬಿಐ ಮತ್ತು ಎಲ್ಐಸಿ ಹಣ ಭದ್ರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅದಾನಿ ಕಂಪನಿಯ ಷೇರು ಕುಸಿತ ಪ್ರಕರಣ ಚರ್ಚಿತವಾಗುತ್ತಿದೆ.ಷೇರು ಮಾರುಕಟ್ಟೆ ಸ್ಥಿತ್ಯಂತರ ಗಳ ಬಗ್ಗೆ ಷೇರ್ ಮಾರ್ಕೆಟ್‌ ರೆಗ್ಯುಲೇಟರಿ ನೋಡಿಕೊಳ್ಳಲಿದೆ.ಸೂಕ್ಷ್ಮ ವಾಗಿ ಪರಿಸ್ಥಿತಿ ಅವಲೋಕನ ಮಾಡಲಿದೆ.ಈಗಾಗಲೇ ಎಸ್ಬಿಐ ಮತ್ತು ಎಲ್ಐಸಿ ಯವರು ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ.ತಮ್ಮ ಹಣಕ್ಕೆ ತೊಂದರೆ ಇಲ್ಲ ಎಂದಿದ್ದಾರೆ.ರೆಗ್ಯುಲೇಟರಿ ಅಥಾರಿಟಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ