ಈ ಒಪ್ಪಂದದಿಂದ ಆಪಲ್ನ ಮೊಬೈಲ್ಗಳ ಉತ್ಪಾದನೆ ಮತ್ತು ಮಾರಾಡದಲ್ಲಿ ಹೆಚ್ಚಳವಾಗಲಿದೆ. ಚೀನಾದಲ್ಲಿ ಐ ಫೋನ್ ಮಾರಾಟ ಕಡಿಮೆ ಇದೆ , ಈ ಒಪ್ಪಂದ ಮೂಲಕ ಹೆಚ್ಚಿನ ಮಾರಾಟವಾಗುವುದು. ಚೀನಾ ಸರ್ಕಾರದ ಬೆಂಬಲ ಕೂಡ ಸಿಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಆಪಲ್ ಮತ್ತು ಚೀನಾ ಮೊಬೈಲ್ ಎರಡೂ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಐ ಫೋನ್ನ ಮಾರಾಟ ಹೆಚ್ಚುವುದು ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಚೀನಾದಲ್ಲಿ ಸಾಮ್ಸಂಗ್ ಮತ್ತು ಸ್ಥಳೀಯ ಮೊಬೈಲ್ಗಳ ಮಾರುಕಟ್ಟೆಗಿಂತ ಆಪಲ್ ಐ ಫೋನ್ನ ಮಾರಾಟ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.