ಬಾಲಕಿಯರ ಮೊಬೈಲ್ ಬಳಕೆಗೆ ನಿಷೇಧ ಹೇರಿದ ಗ್ರಾಮಸಭೆ

ಶುಕ್ರವಾರ, 24 ನವೆಂಬರ್ 2023 (12:42 IST)
ಶಾಲೆಗೆ ಹೋಗುವ ಬಾಲಕಿಯರು ಮತ್ತು ಹದಿ ಹರೆಯದ ಯುವಕರು ಮೊಬೈಲ್ ಬಳಸದಂತೆ ನಿಷೇಧ ಹೇರಲಾಗಿದೆ.  ನಿಷೇಧ ಜಾರಿಗೆ ತರಲಾಗಿದ್ದು, ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅಖಿಲ ಭಾರತೀಯ ವೈಶ್ಯ ಎಕತಾ ಪರಿಷತ್ ಬಾಲಕಿಯರ ಮೊಬೈಲ್ ಬಳಕೆಗೆ ನಿಷೇಧ ಹೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
ಲವ್ ಜಿಹಾದ್‌ಗೆ ಶಾಲಾ ಬಾಲಕಿಯರು ಆಕರ್ಷಿತವಾಗದಿರಲು ಬಾಲಕಿಯರ ಮೊಬೈಲ್ ಬಳಕೆಗೆ ಉತ್ತರಪ್ರದೇಶದ ಖಾಪ್ ಪಂಚಾಯಿತಿಯೊಂದು ಆದೇಶ ಹೊರಡಿಸಿದೆ.  
 
ಆಸಕ್ತಿಕರ ವಿಷಯವೆಂದರೆ, ಮಾಜಿ ಕೇಂದ್ರ ಸಚಿವ ಕಲ್ರಾಜ್ ಮಿಶ್ರಾ ಅವರ ಉಪಸ್ಥಿತಿಯಲ್ಲಿಯೇ ಶಾಲಾ ಬಾಲಕಿಯರು ಮತ್ತು ಯುವಕರು ಮೊಬೈಲ್ ಬಳಸದಂತೆ ನಿಷೇಧ ಹೇರಿಕೆಗೆ ಪಂಚಾಯಿತಿ ಆದೇಶ ನೀಡಿದೆ. 
 
ಅಖಿಲ್ ಭಾರತೀಯ ವೈಶ್ಯ ಎಕತಾ ಪರಿಷತ್ ಅಧ್ಯಕ್ಷ ಸುಮಂತ್ ಗುಪ್ತಾ ಮಾತನಾಡಿ, ಉತ್ತರಪ್ರದೇಶ ಸರಕಾರ ಒಂದು ಸಮುದಾಯವನ್ನು ಓಲೈಸಿ ಮತ್ತೊಂದು ಸಮುದಾಯವನ್ನು ಕೀಳಾಗಿ ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಲವ್ ಜಿಹಾದ್ ವ್ಯಾಮೋಹಕ್ಕೆ ಒಳಗಾಗದಿರಲು ಯುವಕ, ಯುವತಿಯರಿಗೆ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ನಿಷೇಧ ಹೇರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸುಮಂತ್ ಗುಪ್ತಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ