ಜಿಯೋಗೆ ಟಕ್ಕರ್ ನೀಡಲು ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಬದಲಾವಣೆ ಮಾಡಿದ ಏರ್ಟೆಲ್

ಗುರುವಾರ, 4 ಏಪ್ರಿಲ್ 2019 (16:09 IST)
ನವದೆಹಲಿ : ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಅಧಿಕೃತವಾಗಿ ಮಾರುಕಟ್ಟೆಗೆ ಬರುವುದೊಂದೇ ಬಾಕಿಯಿದೆ. ಈ ಮಧ್ಯ  ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್, ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಫ್ರೈಂ ಸದಸ್ಯತ್ವ, ನೆಟ್ಫ್ಲಿಕ್ಸ್ ಸದಸ್ಯತ್ವ ಸೇರಿದಂತೆ ಹೆಚ್ಚುವರಿ ಡೇಟಾಗಳನ್ನು ನೀಡ್ತಿದೆ.

ಮೊದಲು ಮಾರ್ಚ್ 31, 2019 ರವರೆಗೆ ಬೋನಸ್ ಡೇಟಾವನ್ನು ನೀಡಲಾಗಿತ್ತು. ಈಗ ಅವಧಿಯನ್ನು ವಿಸ್ತರಿಸಲಾಗಿದ್ದು, Airtel V-Fiber ಬ್ರಾಡ್ಬ್ಯಾಂಡ್ ಸೇವೆ ಆಯ್ಕೆ ಮಾಡಿಕೊಂಡರೆ 6 ತಿಂಗಳವರೆಗೆ ಹೆಚ್ಚುವರಿ ಡೇಟಾ ಸಿಗಲಿದೆ. ಏರ್ಟೆಲ್ ನ ಈ ಯೋಜನೆ ಕೆಲ ನಗರಗಳಲ್ಲಿ ರೂ. 300 ಲಭ್ಯವಾದರೆ, ಮತ್ತೆ ಕೆಲ ನಗರಗಳಲ್ಲಿ ರೂ. 2,199 ವರೆಗೆ ಇರಲಿದೆ.

 

ಏರ್ಟೆಲ್ ಈ ಯೋಜನೆಗೆ ಯಾವುದೇ ಹೆಚ್ಚುವರಿ ಡೇಟಾ ನೀಡುತ್ತಿಲ್ಲ. ಬದಲಿಗೆ ರು. 799 ಮೇಲ್ಪಟ್ಟ ಯೋಜನೆಗಳಿಗೆ ಹೆಚ್ಚುವರಿ ಡೇಟಾ ನೀಡಲಿದೆ. ರೂ. 799 ಪ್ಲಾನ್ ನಲ್ಲಿ ಗ್ರಾಹಕರಿಗೆ 500 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ರೂ. 999 ಯೋಜನೆಯಡಿ ಗ್ರಾಹಕರಿಗೆ 1000 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ