ಮಾಸ್ಕ್‌ಮ್ಯಾನ್ ಬಿಚ್ಚಿಟ್ಟ ಕಥೆಯನ್ನು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಪರಮೇಶ್ವರ್‌

Sampriya

ಸೋಮವಾರ, 18 ಆಗಸ್ಟ್ 2025 (15:50 IST)
ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಸಂಬಂಧ ಇಂದು ವಿಧಾನಸಭೆಯಲ್ಲು ಊಟದ ವಿರಾಮದ ಬಳಿಕ ಮತ್ತೇ ಚರ್ಚೆ ಮುಂದುವರೆಯಿತು. ಈ ಸಂದರ್ಭದಲ್ಲಿ ಜಿ ಪರಮೇಶ್ವರ್ ಅವರು ಮಾಸ್ಕ್‌ಮ್ಯಾನ್‌ ಧರ್ಮಸ್ಥಳ ಠಾಣೆಯಲ್ಲಿ ಬಿಚ್ಚಿಟ್ಟ ವಿಚಾರವನ್ನು ಹೇಳಿದ್ದಾರೆ. 

ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದ ದೂರುದಾರ ಅತ್ಯಂತ ಭಾರವಾದ ಹೃದಯ ಹಾಗೂ ಪಾಪ ಪ್ರಜ್ಞೆಯಿಂದ ಹೊರ ಬರಲು ಈ ದೂರನ್ನು ನೀಡುತ್ತಿದ್ದೇನೆ.  ಕೆಲ ವರ್ಷಗಳ ಹಿಂದೆ ನನಗೆ ನಿರಂತರವಾಗಿ ಬೆದರಿಕೆಯೊಡ್ಡಿ, ಥಳಿಸಿ ನನ್ನ ಕೈಯಿಂದ ಹಲವಾರ ಪುರುಷ ಹಾಗೂ ಮಹಿಳೆಯರ ಶವಗಳನ್ನು ಹೂತು ಹಾಕಿಸಿದ್ದಾರೆ. 

ನನಗೆ ನಿರಂತರ ಜೀವಬೆದರಿಕೆಯೊಡ್ಡಿ ಶವಗಳನ್ನು ಹೂತುಹಾಕಲಾಯಿತು. ಆ ಪಾಪ ಪ್ರಜ್ಞೆಯಿಂದ ಹೊರಬರಲು ಇದೀಗ ದೂರನ್ನು ನೀಡುತ್ತಿದ್ದೇನೆ. ಈ ಸಂಬಂದ ನನಗೆ ಜೀವಬೆದರಿಕೆಯಿರುವುದರಿಂದ ನನ್ನ ಕುಟುಂಬಕ್ಕೂ ರಕ್ಷಣೆಯನ್ನು ನೀಡಬೇಕೆಂದು ಕೋರಿಕೊಂಡಿದ್ದಾನೆ. 

ಈ ಸಂಬಂಧ ಧರ್ಮಸ್ಥಳದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತೆ. ಇದರ ಬೆನ್ನಲ್ಲೇ ಸುಜಾತಾ ಭಟ್ ಎನ್ನುವವರು ತಮ್ಮ ಮಗಳು ಕೆಲ ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಹೋದವರು ನಾಪತ್ತೆಯಾದವರು ಇಂದಿಗೂ ಪತ್ತೆಯಾಗಿಲ್ಲ ಎಂದು ಮಾಧ್ಯಮವೊಂದಕ್ಕೆ ದೂರನ್ನು ನೀಡುತ್ತಾರೆ. ಅದಲ್ಲದೆ ದೂರನ್ನು ನೀಡುತ್ತಾರೆ. 

ಇದರ ಬೆನ್ನಲ್ಲೇ ತನಿಖೆಯನ್ನು ನಡೆಸಲು ಎಸ್‌ಐಟಿ ನಡೆಸಲಾಯಿತು ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ