ಇನ್ನು ಮುಂದೆ ಅಮೆಜಾನ್‌ನಲ್ಲಿ ಮಾರಿಬಿಡಿ

ಶುಕ್ರವಾರ, 30 ಡಿಸೆಂಬರ್ 2016 (11:16 IST)
ಇ-ಕಾಮರ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಅಧಿಪತ್ಯವನ್ನು ಹೊಂದಿರುವ ಅಮೆಜಾನ್ ಹೊಸದಾಗಿ ’ನಿಮ್ಮ ವಸ್ತುವನ್ನು ನೀವೇ ಮಾರಿಬಿಡಿ’ ಎಂಬ ಹೊಸ ಸೌಲಭ್ಯವನ್ನು ಗ್ರಾಹಕರಿಗಾಗಿ ಒದಗಿಸಿದೆ. ಈ ಸೌಲಭ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯ ಎಂಬುದು ವಿಶೇಷ.
 
ಈ ನೂತನ ಸೇವೆಯಿಂದ ಗ್ರಾಹಕರು ತಾವು ಬಳಸಿದ ವಸ್ತುಗಳನ್ನು ಅಮೆಜಾನ್ ವೇದಿಕೆಯಾಗಿ ಬಳಸಿಕೊಂಡು ಸ್ಥಳೀಯವಾಗಿ ಮಾರಿಕೊಳ್ಳಲು ಸಾಧ್ಯವಾಗಲಿದೆ. ನಾವು ಮಾರಿದ ವಸ್ತುವನ್ನು ಅಮೆಜಾನ್ ಸಂಗ್ರಹಿಸಿ ಖರೀದಿಸಿದ ವ್ಯಕ್ತಿಗೆ ಡೆಲಿವರಿ ಮಾಡಲಿದೆ.
 
ಈ ಸೇವೆಗಾಗಿ ಅಮೆಜಾನ್ ವೆಬ್‍ಸೈಟಿಗೆ ಭೇಟಿ ಕೊಟ್ಟು ’ಸೆಲ್ ಆಸ್ ಇಂಡಿವಿಜ್ಯುವಲ್ ಪೇಜ್’ನಲ್ಲಿ ಅರ್ಜಿ ತುಂಬಬೇಕು. ಅಲ್ಲಿ ಮಾರಬೇಕೆಂದಿರುವ ವಸ್ತುವಿನ ವಿಭಾಗ ಆಯ್ಕೆ ಮಾಡಬೇಕು. ಆನಂತರ ವಸ್ತುವಿನ ಫೋಟೋ, ಬೆಲೆ, ಮಾರಾಟಗಾರರ ವಿಳಾಸ ಇನ್ನಿತರೆ ವಿವರಗಳನ್ನು ದಾಖಲಿಸಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ