ಅಮರನಾಥನ ದರ್ಶನ ಪಡೆಯಲು ಪ್ರಯಾಣ ಬೆಳೆಸಿದ 6064 ಯಾತ್ರಿಕರು

Sampriya

ಬುಧವಾರ, 16 ಜುಲೈ 2025 (17:13 IST)
Photo Credit X
ಜಮ್ಮು: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥನ ದರ್ಶನ ಪಡೆಯಲು ಜುಲೈ 16 ರಂದು  6064 ಯಾತ್ರಿಕರ ತಂಡವೊಂದು ಬುಧವಾರ ತೆರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮರನಾಥ ಯಾತ್ರಾರ್ಥಿಗಳ ಹೊಸ ತಂಡವು ಭಗವತಿ ನಗರ ಮೂಲ ಶಿಬಿರದಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಗುಹೆ ದೇಗುಲಕ್ಕೆ ಪ್ರಯಾಣ ಬೆಳೆಸಿದೆ. 

234 ವಾಹನಗಳ ಸಮೂಹದಲ್ಲಿ ಯಾತ್ರಾರ್ಥಿಗಳು ಜಮ್ಮು ಮೂಲ ಶಿಬಿರದಿಂದ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6064 ಯಾತ್ರಾರ್ಥಿಗಳ ಹೊಸ ಬ್ಯಾಚ್ ಇಂದು ಬೆಳಿಗ್ಗೆ ಜಮ್ಮು ಬೇಸ್ ಕ್ಯಾಂಪ್‌ನಿಂದ ಕಾಶ್ಮೀರದ ಶ್ರೀ ಅಮರನಾಥ ಯಾತ್ರಾ ಗುಹೆ ದೇಗುಲಕ್ಕೆ ಬಿಗಿ ಭದ್ರತೆಯ ನಡುವೆ ಹೊರಟಿತು ಎಂದು ಅವರು ಹೇಳಿದರು.

ಲಘು ಮೋಟಾರು ವಾಹನಗಳು ಮತ್ತು ಭಾರೀ ಮೋಟಾರು ವಾಹನಗಳನ್ನು ಒಳಗೊಂಡ 234 ವಾಹನಗಳ ಸಮೂಹದಲ್ಲಿ 3593 ಯಾತ್ರಿಕರು ಪಹಲ್ಗಾಮ್‌ಗೆ ಮತ್ತು 2471 ಬಾಲ್ಟಾಲ್‌ಗೆ ತೆರಳಿದ್ದಾರೆ ಎಂದು ಅವರು ಹೇಳಿದರು.

ಜುಲೈ 2 ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಲ್ಲಿಂದ ಮೊದಲ ಬ್ಯಾಚ್ ಅನ್ನು ಫ್ಲ್ಯಾಗ್ ಆಫ್ ಮಾಡುವ ಮೂಲಕ 38 ದಿನಗಳ ವಾರ್ಷಿಕ ಯಾತ್ರೆಯು ಎರಡೂ ಮಾರ್ಗಗಳಿಂದ ಪ್ರಾರಂಭವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ