ಗ್ರಾಹಕರಿಗಾಗಿ ಅಮೆಜಾನ್ ಪ್ರಾರಂಭಿಸಿದೆ 'ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್'

ಶುಕ್ರವಾರ, 20 ಸೆಪ್ಟಂಬರ್ 2019 (05:41 IST)
ನವದೆಹಲಿ : ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಅಮೆಜಾನ್ 'ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್'​ ಅನ್ನು ಪ್ರಾರಂಭಿಸದೆ.
ಸೆಪ್ಟೆಂಬರ್​ 29 ರಿಂದ ಅಕ್ಟೋಬರ್​ 4 ರವರೆಗೆ ಒಟ್ಟು ಆರು ದಿನಗಳ ಕಾಲ​ ನಡೆಯಲಿರುವ 'ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್'​ ನಲ್ಲಿ ಗ್ರಾಹಕರಿಗೆ  ವಸ್ತುಗಳ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಅಮೆಜಾನ್​ ಪ್ರೈಮ್​ ಸದ್ಯಸರಿಗೂ ವಿಶೇಷ ಮತ್ತು ಹೆಚ್ಚುವರಿ ಕೊಡುಗೆಗಳನ್ನು ನೀಡಲಾಗಿದ್ದು, ಸೆ. 28ರ ಮಧ್ಯಹ್ನಾ 12 ಗಂಟೆಗೆ ಸೇಲ್​ ಆರಂಭವಾಗಲಿದೆ. ಹಾಗೇ ಅಮೆಜಾನ್​ ಎಸ್ ​ಬಿಐ ಜತೆ ಬ್ಯಾಂಕಿಂಗ್​ ಸಹಯೋಗ ಹೊಂದಿದ್ದು, ಎಸ್​ಬಿ ಕಾರ್ಡ್​ ಬಳಕೆದಾರರಿಗಾಗಿ ಶೇ. 10 ರಷ್ಟು ​ ಡಿಸ್ಕೌಂಟ್​ ನೀಡುತ್ತಿದೆ.


ಸ್ಮಾರ್ಟ್​ಪೋನ್​ಗಳ ಮೇಲೆ ಶೇ.40ರಷ್ಟು ಡಿಸ್ಕೌಂಟ್​ ನೀಡುತ್ತಿದೆ, ಜೊತೆಗೆ ಎಕ್ಸ್​ಚೇಂಜ್​ ಕೊಡುಗೆಗಳನ್ನು ನೀಡುತ್ತಿದೆ. ಹಾಗೇ ವಿವಿಧ ಬ್ರಾಂಡ್ಯ್​ಗಳ ಟಿವಿಗಳ ಮೇಲೆ ಆಕರ್ಷಕ ಕೊಡುಗೆ ನೀಡುತ್ತಿದೆ. ಮಾತ್ರವಲ್ಲದೆ, ಅಮೆಜಾನ್​​ ಫೆಸ್ಟಿವ್​ ಕ್ಯಾಶ್​ ಬ್ಯಾಕ್​​ ಕೊಡುಗೆ ನೀಡುತ್ತಿದೆ. ಇದರ ಜೊತೆಗೆ ಉತ್ಪನ್ನಗಳ ಮೇಲೆ ಅಮೆಜಾನ್​ ಕೂಪನ್​ ನೀಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ