ಅಮೆಜಾನ್‌ನಿಂದ ಗ್ರಾಹಕರಿಗೆ ಬಂಫರ್ ಆಫರ್

ಗುರುಮೂರ್ತಿ

ಮಂಗಳವಾರ, 9 ಜನವರಿ 2018 (18:52 IST)
ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಖ್ಯಾತಿ ಹೊಂದಿರುವ ಅಮೆಜಾನ್ ಸಂಸ್ಥೆ ಇದೀಗ ಗ್ರಾಹಕರಿಗೆ ಹೊಸದೊಂದು ಬಂಫರ್ ಆಫರ್ ಅನ್ನು ನೀಡಿದೆ.
ಹೌದು ನಿನ್ನೆಯಿಂದಲೇ ಪ್ರಾರಂಭವಾಗಿರುವ ನೋಕಿಯಾ ಮೊಬೈಲ್ ವೀಕ್ ಸೇಲ್ ಮೂಲಕ ನೋಕಿಯಾ ಆವೃತ್ತಿಯಾದ ನೋಕಿಯಾ 6 ಮತ್ತು ನೋಕಿಯಾ 8 ಮೊಬೈಲ್‌ಗಳ ಮೇಲೆ 1000 ಹಾಗೂ 2000 ಸಾವಿರ ರೂಪಾಯಿಗಳ ಬಾರಿ ರಿಯಾಯಿತಿಯನ್ನು ಅಮೆಜಾನ್ ಘೋಷಿಸಿದೆ. ಅಲ್ಲದೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವವರಿಗೆ 1500 ರೂಗಳ ತ್ವರಿತ ರಿಯಾಯಿತಿಯನ್ನು ನೀಡಿದೆ. ಈ ಎಲ್ಲಾ ರಿಯಾಯಿತಿ ಆಫರ್‌ಗಳು ಜನವರಿ 12 ರಂದು 12 ಗಂಟೆಯೊಳಗೆ ಇದ್ದು ಅದರೊಳಗೆ ಖರೀದಿಸಿದ ಎಲ್ಲಾ ಮೊಬೈಲ್‌ಗಳಿಗೆ ಈ ರಿಯಾಯಿತಿಗಳು ಅನ್ವಯಿಸುತ್ತವೆ ಎಂದು ಅಮೇಜಾನ್ ಹೇಳಿದೆ.
 
ನೋಕಿಯಾ 6
ನೋಕಿಯಾ ಬಿಡುಗಡೆಗೊಳಿಸಿದ ಮೊಬೈಲ್ ಆವೃತ್ತಿಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ನೋಕಿಯಾ 6 ಮಾದರಿಯು 3 GB RAM ಮತ್ತು 32 GB ಆಂತರಿಕ ಮೆಮೋರಿಯನ್ನು ಹೊಂದಿದೆ. ಅಲ್ಲದೇ ಇದರಲ್ಲಿ 128 GB ವರೆಗೆ ಮೆಮೋರಿಯನ್ನು ವಿಸ್ತರಿಸಬಹುದಾದ ಸಾಮರ್ಥ್ಯವಿದ್ದು, 5.5 ಪೂರ್ಣ ಎಚ್‌ಡಿ ಗುಣಮಟ್ಟದ ಪರದೆಯನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಈ ಮೊಬೈಲ್‌ನಲ್ಲಿ 16 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಇದ್ದು 8 ಮೆಗಾಪಿಕ್ಸೆಲ್‌ನ ಮುಂಬದಿ ಕ್ಯಾಮರಾವನ್ನು ಇದು ಹೊಂದಿದೆ.

ಇದರ ಬ್ಯಾಟರಿ ಗುಣಮಟ್ಟವು ಉತ್ತಮವಾಗಿದ್ದು 3000 mAh ಆಗಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 430 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಆಕ್ಸೆಲೆರೊಮೀಟರ್ (ಜಿ-ಸೆನ್ಸರ್), ಆಂಬಿಯಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಹಾಲ್ ಸೆನ್ಸಾರ್‌, ಫಿಂಗ‌ರ್‌ಪ್ರಿಂಟ್ ಸೆನ್ಸಾರ್‌, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಹೊಂದಿರುವುದರ ಜೊತೆಗೆ 403 ppi ಗ್ರಾಫಿಕ್ಸ್ ಪಿಪಿಐ ಅನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್‌ನಲ್ಲಿ ಜಿಪಿಎಸ್, ವೈಫೈ, ಹಾಟ್‌ಸ್ಪಾಟ್, ಎನ್‌ಎಫ್‌ಸಿ, ಬ್ಲೂಟೂತ್‌ನಂತಹ ಸಂಪರ್ಕ ಆಯ್ಕೆಗಳಿದ್ದು 3G ಮತ್ತು 4G ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
 
ನೋಕಿಯಾ 8
ನೋಕಿಯಾ 8 ಮೊಬೈಲ್ ಫೋನ್‌ನಲ್ಲಿ 5.3 - ಇಂಚಿನ ಪರದೆಯಿದ್ದು 1.8GHz ಓಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 835 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4 GB RAM ಮತ್ತು 64 GB ಆಂತರಿಕ ಮೆಮೋರಿಯನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ 256 GB ವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಈ ಮೊಬೈಲ್ Android Nougat 7.1.1 ನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಡ್ಯೂಯಲ್ ಸಿಮ್ ಸೇವೆಯನ್ನು ನಾವು ಇದರಲ್ಲಿ ಪಡೆಯಬಹುದಾಗಿದೆ.

ಈ ಮೊಬೈಲ್‌ನಲ್ಲಿ ಪರದೆಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ಆವೃತವಾಗಿದ್ದು ಸ್ಕ್ರೀನ್ ಅನ್ನು ಸುರಕ್ಷಿತವಾಗಿರಿಸುವಲ್ಲಿ ಇದು ಸಹಾಯಕಾರಿಯಾಗಿದೆ. ಇದರಲ್ಲಿ ಕಂಪಾಸ್ ಮ್ಯಾಗ್ನೆಟೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್ ಮತ್ತು ಬರೋಮೀಟರ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, 3090 mAh ಬ್ಯಾಟರಿಯನ್ನು ಇದು ಹೊಂದಿದೆ.

ಈ ಫೋನ್ ಜಿಪಿಎಸ್, ವೈಫೈ, ಹಾಟ್‌ಸ್ಪಾಟ್, ಎನ್‌ಎಫ್‌ಸಿ, ಬ್ಲೂಟೂತ್‌ನಂತಹ ಸಂಪರ್ಕ ಆಯ್ಕೆಗಳನ್ನು ಹೊಂದಿರುವುದಲ್ಲದೇ 13 ಮೆಗಾಪಿಕ್ಸೆಲ್ ಇದ್ದು ಮುಂಬದಿ ಕ್ಯಾಮರಾ ಹಾಗೂ 13 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮರಾವನ್ನು ಇದು ಒಳಗೊಂಡಿದೆ. ಈ ಕ್ಯಾಮರಾದಲ್ಲಿ ಮುಖ್ಯವಾಗಿ ಆಟೋ ಪೋಕಸ್, ಫೇಸ್ ಡಿಟೆಕ್ಷನ್, HDR ಪನೋರಮಾ ಮೋಡ್, Geo-ಟ್ಯಾಗಿಂಗ್, ಟಚ್ ಪೋಕಸ್, ಡಿಜಿಟಲ್ ಜೂಮ್ ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ