ಬಹು ನಿರೀಕ್ಷಿತ ಐಪೋನ್-7 ಹಾಗೂ ಐಪೋನ್-7 ಪ್ಲಸ್ ಆವೃತ್ತಿಯ ಐಷಾರಾಮಿ ಪೋನ್‌ಗಳನ್ನು ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡಲು ಆಪಲ್ ಸಂಸ್ಥೆ ಮಾಧ್ಯಮಗಳಿಗೆ ಆಹ್ವಾನ ನೀಡುತ್ತಿರುವ ಬೆನ್ನಲ್ಲೆ, ಈ ಪೋನ್‌ಗಳ ಕುರಿತು ಹಲವು ಮಾಹಿತಿಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಐಪೋನ್-7 ಹಾಗೂ ಐಪೋನ್-7 ಪ್ಲಸ್ ಪೋನ್‌ಗಳು ಸ್ಟೋರೇಜ್ ಸಾಮರ್ಥ್ಯದ ಆಧಾರದ ಮೇಲೆ ಮೂರು ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಹೊಂದುತ್ತಿವೆ ಎಂದು ಹೇಳಲಾಗುತ್ತಿದೆ.
32ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಐಪೋನ್-7 ಆವೃತ್ತಿಯ ಪೋನ್‌ಗಳು 53,000 ರೂಪಾಯಿಗಳಲ್ಲಿ ಲಭ್ಯವಿದ್ದು, 128 ಹಾಗೂ 256ಜಿಬಿ ಸಾಮರ್ಥ್ಯದ ಐಪೋನ್‌ಗಳು ಕ್ರಮವಾಗಿ 61,200 ಮತ್ತು 71,250 ರೂಪಾಯಿಗಳಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
36ಜಿಬಿ, 128ಜಿಬಿ ಹಾಗೂ 256ಜಿಬಿ ಸ್ಟೋರೇಜ್ ಸಾಮರ್ಥ್ಯದ ಐಪೋನ್-7 ಪ್ಲಸ್ ಆವೃತ್ತಿಯ ಪೋನ್‌ಗಳು ಕ್ರಮವಾಗಿ 61,200, 69,200 ಮತ್ತು 79,300 ರೂಪಾಯಿ ದರದಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಆಪಲ್ ಸಂಸ್ಥೆ ಮೂರು ವಿವಿಧ ಬಗೆಯ ಆಪಲ್-7 ಆವೃತ್ತಿಯ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇತ್ತೀಚಿನ ವರದಿಗಳ ಪ್ರಕಾರ, ಐಪೋನ್-7 ಆವೃತ್ತಿಯ ಪೋನ್‌ಗಳು 4.7 ಇಂಚಿನ 3ಡಿ ಟಚ್ ಡಿಸ್‌ಪ್ಲೇ ಹೊಂದಿದ್ದು, ಐಪೋನ್-7 ಪ್ಲಸ್ 5.5 ಇಂಚಿನ ಡಿಸ್‌ಪ್ಲೇ ಹೊಂದಿದೆ ಎಂದು ಹೇಳಲಾಗುತ್ತಿದೆ.
ಐಪೋನ್ ಬಳಕೆದಾರರಿಗೆ ಓದಲು ಹಾಗೂ ಆಪ್ ನ್ಯಾವಿಗೇಷನ್‌ಗೆ ಸಹಾಯಕವಾಗಲೆಂದು ಆಪಲ್ ಸಂಸ್ಥೆ ಡಿಸ್‌ಪ್ಲೇ ರೆಸ್ಯೂಲೆಶನ್ ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ