ಬರಲಿದೆ ಡ್ಯುಯಲ್ ಸಿಮ್ ಆಪಲ್ ಐಫೋನ್?

ಸೋಮವಾರ, 19 ಡಿಸೆಂಬರ್ 2016 (10:49 IST)
ಐಫೋನ್‌ ಬಳಸುವವರ ಒಂದು ಸಮಸ್ಯೆ ಎಂದರೆ ಅದರಲ್ಲಿ ಡ್ಯುಯಲ್ ಸಿಮ್ ಆಯ್ಕೆ ಇಲ್ಲ ಎಂಬುದು. ಆದರೆ ಈ ಸಮಸ್ಯೆಗೆ ಆಪಲ್ ಕಂಪನಿ ಪರಿಹಾರ ಹುಡುಕಿಕೊಂಡಿದೆ. ಶೀಘ್ರದಲ್ಲೇ ಡ್ಯುಯಲ್ ಸಿಮ್ ಐಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಇದಕ್ಕೆ ಸಂಬಂಧಿಸಂತೆ ಆಪಲ್ ಕಂಪನಿ ಪೇಟೆಂಟ್ ಹಕ್ಕುಗಳನ್ನು ಪಡೆದಿದೆ.
 
ಮೂರು ನಾಲ್ಕು ವರ್ಷಗಳಲ್ಲಿ ಐಫೋನ್‌ಗೆ ಭಾರಿ ಬೇಡಿಕೆ ಇದೆ. ಭಾರತ, ಚೀನಾ ದೇಶಗಳಲ್ಲಾದರೆ ಇವುಗಳಿಗೆ ಬೇಡಿಕೆ ಇನ್ನೂ ಅಧಿಕ. ಇಷ್ಟೆಲ್ಲಾ ಬೇಡಿಕೆ ಇದ್ದರೂ ಆಪಲ್ ಕಂಪನಿ ಮಾತ್ರ ಇದುವರೆಗೂ ಡ್ಯುಯಲ್ ಸಿಮ್ ಫೋನ್‌ಗಳನ್ನು ತಯಾರಿಸಲೇ ಇಲ್ಲ. 
 
ಈಗ ಆ ಕೊರತೆಯನ್ನು ನೀಗಿಸಲು ಎರಡು ಸಿಮ್ ಫೋನ್‍ಗಳ ಬಗ್ಗೆ ದೃಷ್ಟಿಕೇಂದ್ರೀಕರಿಸಿದೆಯಂತೆ. ಡ್ಯುಯಲ್ಲ್ ಸಿಮ್ ಟೆಕ್ನಾಲಜಿಗೆ ಸಂಬಂಧಿಸದಂತೆ ಆಪಲ್ ಕಂಪನಿ ಇತ್ತೀಚೆಗೆ ಅಮೆರಾದಲ್ಲಿ ಪೇಟೆಂಟ್ ಹಕ್ಕುಗಳನ್ನು ಪಡೆದುಕೊಂಡಿದೆ. 
 
ಚೀನಾದಲ್ಲೂ ಅನುಮತಿ ಸಿಕ್ಕಿದೆ ಎಂದು ಆ ಕಂಪನಿಯ ಒಬ್ಬ ಅಧಿಕಾರಿ ಇತ್ತೀಚೆಗೆ ತಿಳಿಸಿದ್ದರು. ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಆಪಲ್ ಕಂಪನಿ ಅಡಿಯಿಟ್ಟು ಒಂದು ದಶಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಬಿಡುಗಡೆ ಮಾಡಲಿರುವ ಐಫೋನ್ 8ರಲ್ಲಿ ಸಾಕಷ್ಟು ಬಲಾವಣೆಗಳನ್ನು ತರಲಿದೆಯಂತೆ. ಇದರಲ್ಲಿ ಡ್ಯುಯಲ್ ಸಿಮ್ ಆಪ್ಷನ್ ಸಹ ಇರುತ್ತದಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ