ನಿಮಗೆ ಆಪ್ತರಾದವರು ಸಂತೋಷದಲ್ಲಿದ್ದಾರೆಯೇ ಅಥವಾ ದುಖಃದಲ್ಲಿದ್ದಾರೆಯೇ? ಟ್ವಿಟ್ಟರ್‌ನಲ್ಲಿದೆ ಉತ್ತರ

ಶುಕ್ರವಾರ, 29 ಏಪ್ರಿಲ್ 2016 (20:21 IST)
ನಿಮಗೆ ಆಪ್ತರಾದವರು ಸಂತೋಷದಲ್ಲಿದ್ದಾರೆಯೇ ಅಥವಾ ದುಖಃದಲ್ಲಿದ್ದಾರೆ ಎಂದು ಹೇಗೆ ಪತ್ತೆ ಮಾಡುತ್ತಿರು? ನಾವು ನಿಮ್ಮ ಉತ್ತಮ ಗೆಳೆಯ ಅಥವಾ ನಿಮ್ಮ ಮನಸ್ಥಿತಿಯ ಕುರಿತು ಮಾತನಾಡುತ್ತಿಲ್ಲ. ಈ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಸೀಗಲಿದೆ. ಇದೀಗ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌, ಬಳಕೆದಾರರ ಸಂತೋಷ ಮತ್ತು ದುಖಃ ಪತ್ತೆ ಮಾಡುವಲ್ಲಿ ಸಹಾಯಕವಾಗಿದೆ.
ಭಾರತೀಯ ಮೂಲದವರೊಬ್ಬರು ಸೇರಿದಂತೆ ಕಂಪ್ಯೂಟರ್ ವಿಜ್ಞಾನಿಗಳ ತಂಡ, ಬಳಕೆದಾರರ ಜೀವನದ ನೆಮ್ಮದಿ ಮಟ್ಟವನ್ನು ಪತ್ತೆ ಮಾಡಲು ಒಂದು ಹೊಸ ರೀತಿಯ ಕ್ರಮಾವಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.
 
ಲೋವಾ ವಿಶ್ವವಿದ್ಯಾಲದ ತಂಡ, ಬಳಕೆದಾರರ ಎರಡು ವರ್ಷದ ಡೇಟಾಗಳನ್ನು ಸಂಗ್ರಹಿಸಿ ಅವರ ಜೀವನದ ಸಂತೋಷ ಮತ್ತು ದುಖಃ ಅಳತೆ ಮಾಡುವ ಸಂಶೋಧನೆಯನ್ನು ಮಾಡಿದ್ದಾರೆ.
 
ಚಾವೊ ಯಾಂಗ್ ಮತ್ತು ಪದ್ಮಿನಿ ಶ್ರೀನಿವಾಸನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದ ಕುರಿತು ನಡೆದ ಎಲ್ಲಾ ಸಂಶೋಧನೆಗಿಂತ ಈ ಸಂಶೋಧನೆ ಭಿನ್ನವಾಗಿದೆ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ. 
 
ಯಾಂಗ್ ಮತ್ತು ಶ್ರೀನಿವಾಸನ್ ಅವರು ಅಕ್ಟೋಬರ್ 2012 ರಿಂದ ಅಕ್ಟೋಬರ್ 2014 ರವರೆಗೆ ಮೂರು ಮಿಲಿಯನ್ ಟ್ವಿಟ್‌ಗಳ ದತ್ತಾಂಶವನ್ನು ಸಂಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ