ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ರೈತರಿಗೆ ನಿರಾಸೆಯಾಗಿದೆ. ಇಂದೂ ಕೂಡಾ ಅಡಿಕೆ ಬೆಲೆಯಲ್ಲಿ ಹೆಚ್ಚೇನೂ ಆಗಿಲ್ಲ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗಿತ್ತು. ಇದಾದ ಬಳಿಕ ಬೆಲೆ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಅಡಿಕೆ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿತ್ತು. ಈ ವಾರದ ಆರಂಭದಿಂದಲೂ ಅದೇ ಪರಿಸ್ಥಿತಿಯಿದೆ. ಹೊಸ ಅಡಿಕೆ ಬೆಲೆ 475 ರೂ.ಗಳಷ್ಟೇ ಇದೆ. ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ತಲಾ 365 ರೂ.ಗಳಷ್ಟಿತ್ತು. ಇಂದು ಅದೇ ಬೆಲೆ ಮುಂದುವರಿದಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಮತ್ತೆ ಕೊಂಚ ಇಳಿಕೆಯಾಗಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 10 ರೂ.ಗಳಷ್ಟು ಇಳಿಕೆಯಾಗಿದ್ದು 240 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿರಲಿಲ್ಲ.ಆದರೆ ಇಂದು ತಲಾ 5 ರೂ. ಇಳಿಕೆಯಾಗಿದ್ದು ತಲಾ 305 ರೂ.ಆಗಿದೆ. ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಯಥಾಸ್ಥಿತಿಯಲ್ಲಿದ್ದು 640 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಲೆ ಕಳೆದ ವಾರ ಏರಿಕೆಯಾಗಿತ್ತು. ಈಗಲೂ ನಾಲ್ಕೈದು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ 235 ರೂ. ಗಳಷ್ಟಿದೆ.