Arecanut price today: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್ ಸುದ್ದಿ, ಇಂದಿನ ದರ ಎಷ್ಟಾಗಿದೆ ನೋಡಿ

Krishnaveni K

ಗುರುವಾರ, 22 ಮೇ 2025 (12:06 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ಏರಿಕೆ ಕಾಣದೇ ರೈತರು ನಿರಾಸೆಗೊಳಗಾಗಿದ್ದರು. ಆದರೆ ಇಂದು ಅಡಿಕೆ ಬೆಳೆಗಾರರಿಗೆ ನಿಜಕ್ಕೂ ಬಂಪರ್ ಸುದ್ದಿ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಬೆಲೆ ಏರಿಕೆ ನಿರೀಕ್ಷೆಯಲ್ಲಿರುವ ಅಡಿಕೆ ಬೆಳೆಗಾರರು ಖುಷಿಪಡುವ ಸುದ್ದಿ ಬಂದಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ಇಂದು ಅಡಿಕೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ 460 ರೂ.ಗಳಿದ್ದಿದ್ದು ಇಂದು  10 ರೂ. ಏರಿಕೆಯಾಗಿ 470 ರೂ.ಗಳಾಗಿವೆ.  ಹಳೆ ಅಡಿಕೆ ಬೆಲೆ ಗರಿಷ್ಠ 490 ರೂ.ಗಳಷ್ಟಿತ್ತು. ಇಂದು 10 ರೂ. ಏರಿಕೆಯಾಗಿದ್ದು 500 ರೂ.ಗೆ ಬಂದು ತಲುಪಿದೆ. ಇಂದು ಡಬಲ್ ಚೋಲ್ ಬೆಲೆಯಲ್ಲೂ 10 ರೂ. ಏರಿಕೆಯಾಗಿದ್ದು 500 ರೂ.ಗಳಾಗಿವೆ.

ಹೊಸ ಫಟೋರ ದರ 370 ರೂ.ಗಳಷ್ಟಿತ್ತು ಇದೀಗ 5 ರೂ. ಏರಿಕೆಯಾಗಿ 375 ರೂ. ಗಳಾಗಿವೆ. ಆದರೆ ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಇಂದೂ ಅದೇ ರೀತಿ ಮುಂದುವರಿದಿದೆ. ಹೊಸ ಉಳ್ಳಿಗೆ ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಗಳಷ್ಟಿದೆ. ಹೊಸ ಕೋಕ ದರವೂ 305 ರೂ.ಆಗಿದೆ. ಹಳೇ ಕೋಕ ದರವೂ 305 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು.  ಆದರೆ ಇಂದು ಕಾಳುಮೆಣಸು ದರವೂ ಯಥಾಸ್ಥಿತಿಯಲ್ಲಿದ್ದು 670 ರೂ.ಗಳಷ್ಟೇ ಇದೆ. ಇನ್ನು ಒಣಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 190 ರೂ.ಗಳಷ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ