Arecanut Price today: ಅಡಿಕೆ ಬೆಲೆ ಸ್ಥಿರ, ಕಾಳುಮೆಣಸು ಬೆಳೆಗಾರರಿಗೆ ಗುಡ್ ನ್ಯೂಸ್, ಇಂದಿನ ದರ ಹೀಗಿದೆ

Krishnaveni K

ಶುಕ್ರವಾರ, 4 ಏಪ್ರಿಲ್ 2025 (11:31 IST)
ಬೆಂಗಳೂರು: ಅಡಿಕೆ ಬೆಲೆ ನಿನ್ನೆಗೆ ಹೋಲಿಸಿದರೆ ಇಂದೂ ಹೆಚ್ಚೂ ಇಲ್ಲ ಕಡಿಮೆ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ಹೆಚ್ಚಳವಾಗಿದೆ. ಇಂದಿನ ದರ ಹೇಗಿದೆ ಇಲ್ಲಿದೆ ವಿವರ.
 
ಕಳೆದ ವಾರ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ನಿಂತ ನೀರಾಗಿತ್ತು. ಆದರೆ ಯುಗಾದಿ ಹಬ್ಬದ ಬಳಿಕ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ನಿನ್ನೆ ಹೊಸ ಅಡಿಕೆ ಬೆಲೆ ಗರಿಷ್ಠ 430 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 475 ರೂ.ಗಳಷ್ಟಿತ್ತು. ಡಬಲ್ ಚೋಲ್ ಅಡಿಕೆ ಬೆಲೆ ಗರಿಷ್ಠ 495 ರೂ.ಗಳಷ್ಟಿತ್ತು. ಇಂದೂ ಈ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 
 
ಹೊಸ ಫಟೋರ ದರ 315 ರೂ.ಗಳಷ್ಟಾಗಿದೆ. ಹಳೆ ಫಟೋರ ಕಳೆದ ವಾರದಂತೇ 335 ರೂ. ಗೆ ಗಳಲ್ಲೇ ಇದೆ. ಆದರೆ ಹೊಸ ಉಳ್ಳಿ ದರ ಏರಿಕೆಯಾಗಿದ್ದು ಗರಿಷ್ಠ 170 ರೂ., ಹಳೆ ಉಳ್ಳಿ 195 ರೂ. ಗಳಷ್ಟೇ ಇದೆ. ಆದರೆ ಹೊಸ ಕೋಕ 260 ರೂ., ಹಳೇ ಕೋಕ 10 ರೂ. ಏರಿಕೆಯಾಗಿ 270 ರೂ. ಗಳಾಗಿದೆ.
 
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಈಗ ಬಂಪರ್. ಕಳೆದ ವಾರದವರೆಗೂ ದರ ಗರಿಷ್ಠ 680 ರೂ.ಗಳಷ್ಟಿತ್ತು. ಬಹಳ ದಿನಗಳ ನಂತರ ಈಗ ದರ ಏರಿಕೆಯಾಗಿದ್ದು ಕಾಳುಮೆಣಸು ಗರಿಷ್ಠ ದರ ನಿನ್ನೆ 700 ರೂ. ಗಳಾಗಿತ್ತು. ಇಂದು ಇನ್ನೂ 10 ರೂ. ಏರಿಕೆಯಾಗಿದ್ದು 710 ರೂ.ಗಳಾಗಿವೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ