ಮೇ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಈ ನಿಯಮ ಅನ್ವಯ: ಗಮನಿಸಿ

Krishnaveni K

ಶನಿವಾರ, 29 ಮಾರ್ಚ್ 2025 (10:12 IST)
ನವದೆಹಲಿ: ಇನ್ನು ಮುಂದೆ ಎಟಿಎಂನಿಂದ ಬೇಕಾಬಿಟ್ಟಿ ಹಣ ತೆಗೆಯುವಂತಿಲ್ಲ. ಮೇ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಈ ನಿಯಮ ಅನ್ವಯವಾಗಲಿದೆ. ಈ ಹೊಸ ನಿಯಮ ಗಮನಿಸಿ.

ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಎಟಿಎಂನಿಂದ ಬೇಕಾಬಿಟ್ಟಿ ಹಣ ತೆಗೆಯುವಂತಿಲ್ಲ. ಒಂದು ತಿಂಗಳಿಗೆ ಎಷ್ಟು ಬಾರಿ ಹಣ ತೆಗೆಯಬಹುದು ಎಂಬುದಕ್ಕೆ ಮಿತಿ ಹೇರಲಾಗುತ್ತದೆ. ಮೇ 1 ರಿಂದ ಈ ನಿಯಮ ಜಾರಿಗೆ ಬರಲಿದೆ.

ಮೇ 1 ರಿಂದ ಒಂದು ತಿಂಗಳಿಗೆ ಐದು ಬಾರಿ ಮಾತ್ರ ಉಚಿತವಾಗಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದರೆ ನಿಮ್ಮ ಖಾತೆಯಿಂದ ಪ್ರತೀ ವಿತ್ ಡ್ರಾಗೆ 23 ರೂ. ಶುಲ್ಕ ಬೀಳಲಿದೆ.

ಮೆಟ್ರೊ ನಗರಗಳಲ್ಲಿ ಮೂರು ಬಾರಿ ಮತ್ತು ಇತರೆ ಪ್ರದೇಶಗಳಲ್ಲಿ ಐದು ಬಾರಿ ಉಚಿತವಾಗಿ ವಿತ್ ಡ್ರಾ ಮಾಡಲು ಅವಕಾಶವಿದೆ. ಅದಕ್ಕೂ ಮೀರಿದರೆ ಶುಲ್ಕ ತೆರಬೇಕಾಗುತ್ತದೆ.  ರಾಷ್ಟ್ರೀಯ ಪಾವತಿ ನಿಗಮದ ಪ್ರಸ್ತಾವನೆಯ ಆಧಾರದ ಮೇಲೆ ಆರ್ ಬಿಐ ಈ ಪರಿಷ್ಕರಣೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ