ಬಳಕೆದಾರರೇ ಎಚ್ಚರ!ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ನಕಲಿ ಆ್ಯಪ್ ಸೇರ್ಪಡೆ
ಭಾನುವಾರ, 1 ಸೆಪ್ಟಂಬರ್ 2019 (06:56 IST)
ನವದೆಹಲಿ : ಗೂಗಲ್ ಪ್ಲೇಸ್ಟೋರ್ ನಿಂದ ನಕಲಿ ಆ್ಯಪ್ ಗಳನ್ನು ತೆಗೆದುಹಾಕಿದರೂ ಕೂಡ ಮತ್ತೆ ನಕಲಿ ಆ್ಯಪ್ ಗಳು ಸೇರ್ಪಡೆಯಾಗಿದ್ದು, ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿದೆ ಎನ್ನಲಾಗಿದೆ.
ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ಗಳ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವ ಸೈಮಂಟಿಕ್ ಕಂಪೆನಿ ಈ ಬಗ್ಗೆ ಮಾಹಿತಿ ನೀಡಿದ್ದು, ಗೂಗಲ್ಗೆ ತಿಳಿಯದೆ ಕೆಲ ಆಯಪ್ಗಳು ಪಾಪ್ ಅಪ್ ಜಾಹೀರಾತಿನ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ. ಆಯಪ್ ಬಳಕೆದಾರರು ಜಾಹೀರಾತಿನ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಸುಲಭವಾಗಿ ದೋಚುತ್ತಿದೆ ಎಂದು ತಿಳಿಸಿದೆ.
ಐಡಿಯಾ ನೋಟ್ ಅಭಿವೃದ್ಧಿ ಪಡಿಸಿದ ಒಸಿಆರ್ ಟೆಕ್ಸ್ಟ್ ಸ್ಕ್ಯಾನರ್, GTD, ಕಲರ್ ನೋಟ್ ಆಯಪ್ಗಳು ಹಾಗೂ ಬ್ಯೂಟಿ ಫಿಟ್ನೆಸ್: ಡೈಲಿ ವರ್ಕೌಟ್ ಬೆಸ್ಟ್ HIIT ಆಯಪ್ ಕೂಡ ಬಳಕೆದಾರರಿಗೆ ಜಾಹೀರಾತುಗಳನ್ನು ನೀಡುತ್ತಿದೆ. ಅದರ ಜತೆಗೆ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿನ ಮಾಹಿತಿ ಕದಿಯುವ ಕೆಲಸ ಮಾಡುತ್ತಿವೆ. ಅದರಲ್ಲೂ ಹಿಡನ್ ವ್ಯೂ ಆಯ್ಕೆ ಮೂಲಕ ಜಾಹೀರಾತಿಗೆ ಕ್ಲಿಕ್ಸ್ ಒದಗಿಸುತ್ತಿವೆ. ಹೀಗಾಗಿ ಅಂತಹ ಆ್ಯಪ್ ಕುರಿತು ಬಳಕೆದಾರರು ಎಚ್ಚರಿಕೆ ವಹಿಸುವುದು ಉತ್ತಮ ಎಂದು ತಿಳಿಸಿದೆ.