ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಬೆಲೆಯಲ್ಲಿ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಬುಧವಾರ, 28 ಆಗಸ್ಟ್ 2019 (06:53 IST)
ನವದೆಹಲಿ : ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಬೆಲೆಯಲ್ಲಿ ಬಾರೀ ಇಳಿಕೆ ಮಾಡಿದ್ದು, ಆ ಮೂಲಕ ಮಹಿಳೆಯರಿಗೆ ಸಿಹಿಸುದ್ದಿ ನೀಡಿದೆ.
ಮಹಿಳೆಯರ ಹಿತಕ್ಕಾಗಿ ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ಕೇವಲ ಒಂದು ರೂ.ಗೆ ಇಳಿಕೆ ಮಾಡಿದ್ದು, ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಆಗಸ್ಟ್ 27ರಿಂದಲ್ಲೇ ಇದು ಲಭ್ಯವಾಗಲಿದೆ. ಈ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.


ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯಾಡ್ ಗಳ ಬೆಲೆ 20 ರೂಪಾಯಿಗಳಿಗೂ ಅಧಿಕವಾಗಿದೆ. ಆದರೆ ಜನೌಷಧ ಕೇಂದ್ರಗಳಲ್ಲಿ ದೊರೆಯುವ ಸುವಿಧಾ ಹೆಸರಿನ ಸ್ಯಾನಿಟರಿ ನ್ಯಾಪ್ಕಿನ್ 4 ಪ್ಯಾಡ್ ಗಳ ಬೆಲೆ ಈ ಹಿಂದೆ 10 ರೂ ಗಳಾಗಿತ್ತು. ಆದರೆ ಈಗ ಒಂದು ಪ್ಯಾಕ್ ನಾಲ್ಕು ರೂಪಾಯಿಗೆ ಲಭ್ಯವಾಗಲಿದೆ. ಇದು ದೇಶದ 5500 ಜನೌಷದ ಕೇಂದ್ರಗಳಲ್ಲಿ ದೊರೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ