ಪ್ಲಾಸ್ಟಿಕ್ ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳುಮಾಡುತ್ತಿರುವುದರಿಂದ ಅದರ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಕೋ- ಫ್ರೆಂಡ್ಲಿ ಪೇಪರ್ ಶ್ರೇಡ್ ವಸ್ತುಗಳಿಂದ ತಯಾರಿಸಿದ ಪೇಪರ್ ಬ್ಯಾಗ್ಗಳನ್ನು ಬಳಸುವ ಮೂಲಕ ಪಾಲಿ ಪೌಚ್, ಬಬಲ್ ರ್ಯಾಪ್ ಮತ್ತು ಏರ್ ಬ್ಯಾಗ್ಗಳ ಬಳಕೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಫ್ಲಿಪ್ಕಾರ್ಟ್ ಸಂಸ್ಥೆ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬಳಕೆಯನ್ನು ಶೇ. 25 ರಷ್ಟು ಕಡಿಮೆ ಮಾಡಿದ್ದು, 2021ರ ಮಾರ್ಚ್ ವೇಳೆಗೆ ಸಂಪೂರ್ಣ ಮರು ಬಳಕೆಯ ಪ್ಲಾಸ್ಟಿಕ್ ಗಳನ್ನು ಬಳಸುವತ್ತ ಗಮನ ಹರಿಸಿದೆ ಎನ್ನಲಾಗಿದೆ.