ಆನ್ ಲೈನ್ ಶಾಪಿಂಗ್ ವೇಳೆ ಕ್ಯಾಶ್ ಬ್ಯಾಕ್ ಪಡೆಯುವ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್
ಭಾನುವಾರ, 30 ಜೂನ್ 2019 (06:44 IST)
ನವದೆಹಲಿ : ಆನ್ಲೈನ್ ವಹಿವಾಟಿನ ವೇಳೆ ಖರೀದಿಸಿದ ವಸ್ತುಗಳ ಮೇಲೆ ಕ್ಯಾಶ್ ಬ್ಯಾಕ್, ರಿಯಾಯಿತಿ ಸಿಗುತ್ತದೆ ಎಂದು ಖುಷಿ ಪಡುತ್ತಿದ್ದ ಗ್ರಾಹಕರಿಗೆ ಇದೀಗ ಸರ್ಕಾರ ಕಹಿಸುದ್ದಿಯೊಂದನ್ನು ನೀಡಿದೆ.
ಪೇಟಿಎಂ, ಗೂಗಲ್ ಪ್ಲೇ, ಪೋನ್ ಪೇ ಸೇರಿದಂತೆ ಅನೇಕ ಆ್ಯಪ್ ಗಳ ಮೂಲಕ ಆನ್ಲೈನ್ ಖರೀದಿಯ ವೇಳೆ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಯುಪಿಐ, ಇ-ವ್ಯಾಲೆಟ್‌ಗಳು, ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಅಥವಾ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರಿಗೆ ಅನೇಕ ಕ್ಯಾಶ್ ಬ್ಯಾಕ್ ಗಳ ರೂಪದಲ್ಲಿ ಕೊಡುಗೆಗಳನ್ನು ನೀಡುತ್ತವೆ. ಆದರೆ ಇನ್ನುಮುಂದೆ ಇದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆಯಂತೆ.
ಹೌದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56 (2) ರ ಅಡಿಯಲ್ಲಿ ಯಾವುದೇ ತೆರಿಗೆದಾರ 50,000 ಕ್ಕೂ ಹೆಚ್ಚು ಕ್ಯಾಶ್ ಬ್ಯಾಕ್ ಪಡೆದಿದ್ದರೆ ಉಡುಗೊರೆ ತೆರಿಗೆ ಅಥವಾ ಇತರ ತೆರಿಗೆ ವಿಧಿಸಲಾಗುತ್ತದೆ. ಕ್ಯಾಶ್ ಬ್ಯಾಕ್ ಉಚಿತ ಡ್ರೈವ್, ಫ್ರೀ ಟಿಕೆಟ್ ರೂಪದಲ್ಲಿ ಸಿಕ್ಕಿದ್ರೆ ಮಾತ್ರ ತೆರಿಗೆ ವಿಧಿಸಬೇಕಾಗಿಲ್ಲವಂತೆ.