ಗ್ರಾಹಕರೇ ಎಚ್ಚರ! ನಿಮ್ಮ ಖಾತೆಯಲ್ಲಿರುವ ಹಣ ಕೊಳ್ಳೆಹೊಡೆಯುತ್ತೆ ಈ ಆ್ಯಪ್
ಮಂಗಳವಾರ, 26 ಮಾರ್ಚ್ 2019 (10:29 IST)
ಬೆಂಗಳೂರು : ಇತ್ತೀಚೆಗೆ ಆನ್ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಹೆಚ್.ಡಿ.ಎಫ್.ಸಿ. ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ AnyDesk ಡೌನ್ಲೋಡ್ ಮಾಡುವಂತೆ ಸಲಹೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ AnyDesk ಹೆಸರಿನ ಆನ್ಲೈನ್ ಆಪ್ ಡೌನ್ಲೋಡ್ ಮಾಡಬೇಡಿ. ಒಂದು ವೇಳೆ ಗ್ರಾಹಕರು ನಂಬಿ ಆಪ್ ಡೌನ್ಲೋಡ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಅದು ಸಂಪೂರ್ಣ ಖಾಲಿ ಮಾಡುತ್ತದೆ ಎಂದು ತನ್ನ ಗ್ರಾಹಕರನ್ನು ಆನ್ಲೈನ್ ಬ್ಯಾಂಕಿಂಗ್ ವಂಚನೆಯಿಂದ ಬಚಾವ್ ಮಾಡಲು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಎಸ್‌ಎಂಎಸ್ ಕಳುಹಿಸುತ್ತಿದೆ.
ಈ ಹಿಂದೆ ಆರ್.ಬಿ.ಐ. ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಸಣ್ಣ ಸಾಫ್ಟ್ವೇರ್ ನಿಮ್ಮ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡ್ತಿದೆ. ಹಾಗಾಗಿ AnyDesk ಆಪ್ ಡೌನ್ಲೋಡ್ ಮಾಡಬೇಡಿ ಎಂದು ತಿಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.