ಟಿಕ್ ಟಾಕ್ ವಿಡಿಯೋ ಆ್ಯಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್
ಶುಕ್ರವಾರ, 5 ಏಪ್ರಿಲ್ 2019 (13:25 IST)
ನವದೆಹಲಿ : ಟಿಕ್ ಟಾಕ್ ವಿಡಿಯೋ ಆ್ಯಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್. ಟಿಕ್ ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಹೌದು. ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದ 130 ಕೋಟಿ ಜನರು ಟಿಕ್ ಟಾಕ್ ಬಳಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಟಿಕ್ ಟಾಕ್ ಆ್ಯಪ್ ನಲ್ಲಿ ವಿಭಿನ್ನ ಎಫೆಕ್ಟ್ ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದು ಮತ್ತು ಶಾರ್ಟ್ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ.
ಇದಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ಟಿಕ್ ಟಾಕ್ ವಿಡಿಯೋ ಆ್ಯಪ್ ಬಳಸುವ ಮಕ್ಕಳು ಲೈಂಗಿಕತೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಯಾವುದೇ ಫಿಲ್ಟರ್ ಇಲ್ಲದ ಕಾರಣ ಯಾವ ರೀತಿಯ ವಿಡಿಯೋ ಬೇಕಾದರೂ ಎಫೆಕ್ಟ್ ಗಳೊಂದಿಗೆ ಚಿತ್ರೀಕರಿಸಬಹುದು. ಅಪರಿಚಿತರ ಜೊತೆಗೆ ಮಕ್ಕಳು ಬಹುಬೇಗ ಪರಿಚಯ ಮಾಡಿಕೊಳ್ಳಲು ಈ ಆ್ಯಪ್ ನಲ್ಲಿ ಅವಕಾಶವಿದೆ. ಇದರಿಂದ ಮುಂದೆ ಮಕ್ಕಳಿಗೆ ತೊಂದರೆಯಾಗಬಹುದು, ಅವರ ಮೇಲೆ ಅಪರಿಚಿತರು ದೌರ್ಜನ್ಯ ನಡೆಸಬಹುದು. ಆದ್ದರಿಂದ ಈ ಆ್ಯಪ್ ಅನ್ನು ಬ್ಯಾನ್ ಮಾಡಬೇಕೆಂದು ಕೋರ್ಟ್ ಹೇಳಿದೆ.