ಬಜಾಜ್ ಡಿಸ್ಕವರ್ ಬೈಕ್ 110 ಸಿಸಿ ಬೈಕ್ ಮಾರುಕಟ್ಟೆಗೆ

ಗುರುಮೂರ್ತಿ

ಸೋಮವಾರ, 8 ಜನವರಿ 2018 (16:30 IST)
ಭಾರತದ ಮಾರುಕಟ್ಟೆಯಲ್ಲಿ ಉತ್ತಮವಾದ ವಿನ್ಯಾಸ ಮತ್ತು ದರಗಳಿಂದ ಹೆಸರುವಾಸಿಯಾಗಿರುವ ಬಜಾಜ್ ಕಂಪನಿ ನೂತನ ವರ್ಷಕ್ಕೆ ಡಿಸ್ಕವರ್ ಬೈಕ್ ಆವೃತ್ತಿಗಳಲ್ಲಿ ನೂತನವಾಗಿರುವ 110 ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ 
ಈಗಾಗಲೇ ಡಿಸ್ಕವರ್ 125 ಮತ್ತು 100 ಸಿಸಿ ಮಾದರಿಯನ್ನು ಬಜಾಜ್ ಬಿಡುಗಡೆ ಮಾಡಿತ್ತಾದರೂ ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸದಾಗಿ 110 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಮಾಡುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ ಮೂಲಗಳ ಪ್ರಕಾರ ಇದೇ ತಿಂಗಳು 10 ಅಥವಾ ತಿಂಗಳು ಕೊನೆಯ ವಾರ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನೆಡೆಸಿದೆ ಎಂದು ಹೇಳಲಾಗಿದೆ.
 
ಇದು ಹಳೆಯ 125 ಮತ್ತು 100 ಸಿಸಿ ಬೈಕ್‌ಗಳಿಗೆ ಹೋಲಿಸಿದಲ್ಲಿ ಈ ಬೈಕ್‌ನ ವಿನ್ಯಾಸ, ಗ್ರಾಫಿಕ್ಸ್‌ಗಳಲ್ಲಿ ಸುಧಾರಣೆ ಮಾಡಲಾಗಿದ್ದು, ಮೈಲೇಜು ಅನ್ನು ಹೆಚ್ಚಾಗಿ ಗಮನಿಸುವ ಗ್ರಾಹಕರಿಗೆ ಇದು ಒಂದು ಉತ್ತಮ ಆಯ್ಕೆಯಾಗಬಹುದು. ಇದು 125 ಸಿಸಿ ಮತ್ತು 100 ಸಿಸಿ ಮಾದರಿಯಲ್ಲೇ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಕಡುಗಪ್ಪು ಬಣ್ಣ ಹೊಂದಿರುವ ಅಲಾಯ್ ಚಕ್ರಗಳು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಮತ್ತು ಎಂಜಿನ್ ಸೇರಿದಂತೆ ಎಲ್ಲವೂ ಕಪ್ಪು ಬಣ್ಣವನ್ನು ಹೊಂದಿದ್ದು, ಹಳೆಯ ಬೈಕ್‌ಗಳಿಗಿಂತ ಸ್ವಲ್ಪ ಭಿನ್ನತೆವಾಗಿ ಕಾಣುವ ಸ್ಪೋರ್ಟ್ ಮಾದರಿಯ ಗ್ರಾಫಿಕ್ಸ್‌ಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ. 
ಇದು 110ಸಿಸಿ ಏರ್ ಕೂಲ್ಡ್ DTS-i ಎಂಜಿನ್ ಹೊಂದಿರುವುದರ ಜೊತೆಗೆ ಈ ಬೈಕ್ ಎಲೆಕ್ಟ್ರಿಕ್ ಸ್ಟಾರ್ಟರ್ ಮತ್ತು ಡ್ರಮ್ ಬ್ರೇಕ್ ಸಿಸ್ಟಂ ಹೊಂದಿದ್ದು, ಡಿಸ್ಕ್ ಮಾದರಿಯ ಬ್ರೇಕ್ ಅನ್ನು ಕೂಡಾ ನಾವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.5-ಬಿಎಚ್‌ಪಿ ಮತ್ತು 9.5-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದ್ದು, ಆರಾಮದಾಯಕ ಚಾಲನೆಗೆ ಬೈಕ್ ಉತ್ತಮವಾಗಿದೆ. ಮೂಲಗಳ ಪ್ರಕಾರ ಈ ಹೊಸ ಡಿಸ್ಕವರ್ 110 ಸಿಸಿ ಬೈಕ್‌ನ ಎಕ್ಸ್ ಶೋ ರೂಂ ಬೆಲೆಯು 50,500 ಆಗಿದ್ದು, ಪ್ರತಿ ಲೀಟರ್‌ಗೆ 65 ಕಿಮಿ ಮೈಲೇಜ್ ನೀಡುತ್ತದೆ ಎನ್ನಲಾಗಿದೆ.
 
ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಈ ಬೈಕ್ ಸಂಚಲನ ಮುಡಿಸುವುದು ಬಹುತೇಕ ಖಚಿತವಾಗಿದ್ದು, ಹಿರೋ ಆವೃತ್ತಿಯ 100 ಸಿಸಿ ಮತ್ತು 125 ಸಿಸಿ ಬೈಕ್‌ ಮತ್ತು ಟಿವಿಎಸ್‌ನ 110 ಸಿಸಿ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಡಿಸ್ಕವರ್ 110 ಸಿಸಿ ಬೈಕ್‌ನಲ್ಲಿ ಹಳೆಯ ಆವೃತ್ತಿಯಾದ 125 ಸಿಸಿ ಮಾದರಿಯ ಬೈಕ್‌ನಲ್ಲಿರುವ ಸೌಲಭ್ಯವನ್ನು ನೀಡಲಾಗಿದ್ದು, ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ 110 ಸಿಸಿ ಮಾದರಿ ಬೈಕ್‌ ಅನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.
 
ನೀವು ಒಂದು ವೇಳೆ ಹೊಸ ವರ್ಷದಲ್ಲಿ ಬೈಕ್ ಕೊಳ್ಳಬೇಕು ಅದು ಕಡಿಮೆ ದರ ಹಾಗೂ ಉತ್ತಮ ಶೈಲಿಯನ್ನು ಹೊಂದಿರಬೇಕು ಎಂದು ನೀವು ಬಯಸಿದಲ್ಲಿ ಈ ಬೈಕ್ ನಿಮಗೆ ಇಷ್ಟವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ