ಮೊದಲ ಹಂತದಲ್ಲಿ, ಮುಂಬೈ, ಗುಜರಾತ್, ದೆಹಲಿ, ಕರ್ನಾಟಕ, ಮತ್ತು ಕೊಲ್ಕತ್ತಾದಲ್ಲಿ ವೊಡಾಫೋನ್ VoLTE ಸೇವೆಗಳು ಲಭ್ಯವಿದ್ದು ಕೆಲವೇ ದಿನಗಳಲ್ಲಿ ಈ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ಕಂಪತಿಯ ಮೂಲಗಳು ತಿಳಿಸಿವೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಪರ್ಕ ಸೇವೆ ಮತ್ತು ಡೇಟಾ ಸ್ಟ್ರಾಂಗ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುವ ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ಈ ಸೇವೆಯನ್ನು ವೊಡಾಫೋನ್ ಸಂಸ್ಥೆ ಆರಂಭಿಸಿದ್ದು ಇದು ಮಾರುಕಟ್ಟೆಯಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ವೊಡಾಫೋನ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸುನಿಸ್ ಸುದ್ ಅವರು ತಿಳಿಸಿದ್ದಾರೆ.
ಪ್ರಸ್ತುತವಾಗಿ ದೇಶದಾದ್ಯಂತ ಜಿಯೋ ಮಾತ್ರವೇ ಈ ಸೇವೆಯನ್ನು ಒದಗಿಸುತ್ತಿದ್ದು, ಭಾರತಿ ಏರ್‌ಟೆರ್ ಪ್ರಮುಖ ನಗರಗಳಲ್ಲಿ ಮಾತ್ರ ಈ ಸೇವೆಯನ್ನು ಹೊಂದಿದ್ದು, ಅದರ ಸಾಲಿಗೆ ವೋಡಾಫೋನ್ ಕೂಡಾ ಸೇರಿಕೊಳ್ಳುತ್ತಿದೆ ಎಂಬುದು ಗಮನಾರ್ಹ.