ಇದು ಪ್ರಪಂಚದ ಅತೀ ಚಿಕ್ಕ ಮೊಬೈಲ್ ಆಗಿದ್ದು, ಸುಲಭವಾಗಿ ನಿಮ್ಮ ಕಿಸೆಯಲ್ಲಿ ಇರಿಸಬಹುದಾಗಿದೆ. ಇದು ನೋಡಲು ತುಂಬಾ ವಿಶೇಷವಾಗಿದ್ದು, ಇದು UK ಮೂಲದ ಸ್ಟಾರ್ಟ್‌ಆಪ್ ಕಂಪನಿಯಾದ ಕ್ಲೂಬಿಟ್ ನ್ಯೂ ಮೀಡಿಯಾ ಇದನ್ನು ಬಿಡುಗಡೆ ಮಾಡಿದ್ದು ಈ ಮೊಬೈಲ್‌ಗೆ ಝನ್ಕೊ ಟಿನೈ ಟಿ1 ಎಂದು ಹೆಸರಿಸಲಾಗಿದೆ.
ಈ ಮೊಬೈಲ್ 13 ಗ್ರಾಂ ತೂಕವಿದ್ದು, 0.49-ಇಂಚಿನ OLED ಅನ್ನು ಹೊಂದಿದೆ. ಇದು ನ್ಯಾನೋ ಸಿಮ್ ಅನ್ನು ಹೊಂದಿದ್ದು ಫೋನ್‌ಬುಕ್‌ನಲ್ಲಿ 300 ಸಂಪರ್ಕಗಳ ಸಂಖ್ಯೆಗಳ ಜೊತೆಗೆ 50 ಎಸ್‌ಎಮ್‌ಎಸ್ ಸಂದೇಶಗಳನ್ನು ಸಹ ಇದರಲ್ಲಿ ಉಳಿಸಬಹುದಾಗಿದೆ. ಇದರ ಪರದೆಯು ಚಿಕ್ಕದಾಗಿದ್ದು ಹೆಚ್ಚಿನ ಭಾಗವನ್ನು ಇದರ ಕೀಪ್ಯಾಡ್ ಆವರಿಸಿಕೊಂಡಿದೆ. ಇದಲ್ಲದೇ ಈ ಫೋನಿನಲ್ಲಿ ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿದ್ದು 32 MB RAM ಅನ್ನು ಹೊಂದಿದೆ.
ಇದು ಉತ್ತಮ ಸಂಪರ್ಕ ಸಾಧನವಾಗಿದ್ದು ಇದರಲ್ಲಿ 2G ಸಂಪರ್ಕ, ಬ್ಲೂಟೂತ್ ಮತ್ತು ಮೈಕ್ರೋ USB ಅನ್ನು ಇದು ಹೊಂದಿದೆ. ಇದು 850/1900 and 900/1800 2G ಪ್ರಿಕ್ವೆನ್ಸಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 3G ಮತ್ತು 4G ಸಂಪರ್ಕಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಇದರಲ್ಲಿ ಯಾವುದೇ ಇಂಟರ್ನೆಟ್ ಬಳಕೆಯ ಆಯ್ಕೆಯನ್ನು ನೀಡಲಾಗಿಲ್ಲ. ಇದರಲ್ಲಿ ಲೌಡ್ ಸ್ಪೀಕರ್ ಹೊಂದಿದ್ದು ಇದರ ಬೆಲೆ ರೂ. 2,500 ರ ಅಸುಪಾಸಿನಲ್ಲಿ ಇರಲಿದೆ. ಅತೀ ಸಣ್ಣ ಗಾತ್ರದಲ್ಲಿ ಕಾಣಿಸಿಕೊಂಡಿರುವ ಈ ಫೋನ್ ಮುಂದಿನ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.