ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರಕ್ಕೆ ಕೊಕ್ಕೆ

ಮಂಗಳವಾರ, 21 ಮಾರ್ಚ್ 2017 (18:30 IST)
ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರವನ್ನು 3 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಇಳಿಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮನವಿ ಮಾಡಿದೆ.
 
ಕೇಂದ್ರ ಸರಕಾರ ಕಪ್ಪು ಹಣವನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
 
ನೋಟ್ ಬ್ಯಾನ್‌ ನಂತರ ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರವನ್ನು 3 ಲಕ್ಷ ರೂಪಾಯಿಗಳಿಗೆ ನಿಗದಿಗೊಳಿಸಲಾಗಿತ್ತು. ಇದೀಗ ಆರ್‌ಬಿಐ 3 ಲಕ್ಷ ರೂಪಾಯಿಗಳ ನಗದು ಮಿತಿಯನ್ನು 2 ಲಕ್ಷ ರೂಪಾಯಿಗಳಿಗೆ ಇಳಿಕೆ ಮಾಡುವಂತೆ ಕೋರಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ