ಇಂತಹ ನೋಟುಗಳನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳು ಸ್ವೀಕರಿಸುವುದಿಲ್ಲ-ಆರ್.ಬಿ.ಐ. ಸೂಚನೆ

ಶುಕ್ರವಾರ, 22 ಮಾರ್ಚ್ 2019 (08:55 IST)
ನವದೆಹಲಿ : ಹರಿದ ಹಾಗೂ ಬರಹವಿರುವ ನೋಟುಗಳನ್ನು ಬ್ಯಾಂಕ್ ಗಳು ಸ್ವೀಕರಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿತ್ತು. ಆದರೆ ಕೆಲವೊಂದು ನೋಟುಗಳನ್ನು ಬ್ಯಾಂಕ್ ಕೂಡ ಸ್ವೀಕರಿಸುವುದಿಲ್ಲ ಎಂಬುದಾಗಿ ತಿಳಿಸಿದೆ.


ಹೌದು. ನಿಮ್ಮ ಬಳಿ ಬಣ್ಣ ತಾಗಿದ ಅಥವಾ ಸ್ವಲ್ಪ ಹರಿದ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಗೆ ನೀಡಬಹುದಾಗಿದ್ದು, ಎಲ್ಲ ಬ್ಯಾಂಕುಗಳು ಇಂಥ ನೋಟುಗಳನ್ನು ತೆಗೆದುಕೊಳ್ಳುತ್ತವೆ ಎಂದು ರಿಸರ್ವ್ ಬ್ಯಾಂಕ್ ಈ ಹಿಂದೆ ತಿಳಿಸಿತ್ತು. ಆದರೆ ಉದ್ದೇಶಪೂರ್ವಕವಾಗಿ ನೋಟನ್ನು ಹಾಳು ಮಾಡಬೇಡಿ ಎಂದು ಸೂಚನೆ ನೀಡಿತ್ತು.


ಆದರೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,ನೋಟುಗಳಿಗೆ ಸಂಬಂಧಿಸಿದಂತೆ 2017ರಲ್ಲಿಯೇ ನಿಯಮವೊಂದನ್ನು ಜಾರಿಗೆ ತಂದಿದ್ದು, ನಿಯಮದ ಪ್ರಕಾರ, ನೋಟಿನ ಮೇಲೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಸ್ಲೋಗನ್ ಇರಬಾರದು. ಸ್ಲೋಗನ್ ಇದ್ದರೆ ಯಾವುದೇ ಬ್ಯಾಂಕ್ ಇದನ್ನು ಸ್ವೀಕರಿಸುವುದಿಲ್ಲ. ರಿಸರ್ವ್ ಬ್ಯಾಂಕ್ ಕೂಡ ಇದನ್ನು ಸ್ವೀಕರಿಸುವುದಿಲ್ಲ. ನೋಟಿನ ಮೌಲ್ಯ ಎಷ್ಟೇ ಇದ್ರೂ ಅದು ರದ್ದಾಗುತ್ತದೆ ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ