ಲಾಕರ್ ನಲ್ಲಿ ಒಡವೆ ಇಟ್ಟಿದ್ದರೆ ಇನ್ನು ಬ್ಯಾಂಕ್ ಗಳು ಹೊಣೆಗಾರರಲ್ಲ!

ಸೋಮವಾರ, 26 ಜೂನ್ 2017 (08:56 IST)
ನವದೆಹಲಿ: ಮನೆಯಲ್ಲಿ ಇಟ್ಟರೆ ಸುರಕ್ಷಿತವಲ್ಲ ಎಂದು ನಿಮ್ಮ ಒಡವೆಗಳನ್ನು ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದೀರಾ? ಹಾಗಿದ್ದರೆ ಅದರ ಜವಾಬ್ದಾರಿಯೂ ಇನ್ನು ಮುಂದೆ ನಿಮ್ಮದೇ!

 
ಬ್ಯಾಂಕ್ ನಲ್ಲಿಟ್ಟ ಒಡವೆ ಕಳುವಾದರೆ ಇನ್ನು ಆಯಾ ವ್ಯಕ್ತಿಗಳೇ ಹೊಣೆಗಾರರು ಹೊರತು, ಏನಾದರೂ ನಷ್ಟವಾದರೆ ಬ್ಯಾಂಕ್ ಗಳು ಜವಾಬ್ದಾರರಲ್ಲ ಎಂದು ಆರ್ ಬಿಐ ಹೇಳಿದೆ. ಬ್ಯಾಂಕ್ ದರೋಡೆ ನಡೆದು ಒಡವೆ ಕಳುವಾದರೂ ಇನ್ನು ಬ್ಯಾಂಕ್ ಗಳನ್ನು ಹೊಣೆ ಮಾಡುವಂತಿಲ್ಲ.

ಇದು ಗ್ರಾಹಕರಿಗೆ ನಿಜಕ್ಕೂ ಶಾಕಿಂಗ್ ನ್ಯೂಸ್ ಆಗಿದ್ದು, ಈ ಬಗ್ಗೆ ಮಾಹಿತಿ ಬಯಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ವಕೀಲರು ಇದೀಗ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಬ್ಯಾಂಕ್ ಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿವೆ ಎಂದು ಅರ್ಜಿದಾರ ವಕೀಲರು ಆರೋಪಿಸಿದ್ದಾರೆ.

ಒಂದು ವೇಳೆ ಮಾಲಿಕರಿಗೆ ಹೆಚ್ಚಿನ ಭದ್ರತೆ ಬೇಕಾಗಿದ್ದರೆ ಆಭರಣಗಳಿಗೆ ವಿಮೆ ಮಾಡಿಸಿ ಬ್ಯಾಂಕ್ ಲಾಕರ್ ಅಥವಾ ಮನೆಯಲ್ಲೇ ಇಟ್ಟುಕೊಳ್ಳಬಹುದು ಎಂದು ಬ್ಯಾಂಕ್ ಲಾಕರ್ ಒಪ್ಪಂದದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ