ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವ ಮುನ್ನ ಎಚ್ಚರ
ಮಂಗಳವಾರ, 11 ಜೂನ್ 2019 (07:34 IST)
ನವದೆಹಲಿ : ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವವರಿಗೆ ಮೋದಿ ಸರ್ಕಾರ ಶಾಕ್ ನೀಡಿದೆ.
ಹೌದು. ನಗದು ವ್ಯವಹಾರ ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಮೋದಿ ಸರ್ಕಾರ ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವವರ ಮೇಲೆ ತೆರಿಗೆ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ವರದಿ ಪ್ರಕಾರ, ಹೆಚ್ಚಿನ ವ್ಯಕ್ತಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ವರ್ಷಕ್ಕೆ 10 ಲಕ್ಷ ನಗದು ವಿತ್ ಡ್ರಾ ಮಾಡುವ ಅವಶ್ಯಕತೆಯಿರುವುದಿಲ್ಲ. ಆದ್ದರಿಂದ ಸರ್ಕಾರ ಈ ಅಭಿಪ್ರಾಯಕ್ಕೆ ಬಂದಿದೆ. ತೆರಿಗೆ ವಿಧಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇನ್ನು ಯೋಜನೆಯನ್ನು ಅಂತಿಮಗೊಳಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.