ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಹೆಸರಿನ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಕೊಡುಗೆಯಾಗಿ ನೀಡಿದ್ದಾರೆ.
ಆಗಾಗ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಕಿಚ್ಚ ‘ಕಿಚ್ಚ ಸುದೀಪ ಚ್ಯಾರಿಟೇಬಲ್ ಟ್ರಸ್ಟ್’ ನಡಿಯಲ್ಲಿ ಶೂ ಕೊಡಿಸಿದ್ದಾರೆ.
ಅಷ್ಟೇ ಅಲ್ಲ, ಮಕ್ಕಳೊಂದಿಗೆ ಬೆರೆತು ತಾವೇ ಕೈಯಾರೆ ಕೆಲವು ಮಕ್ಕಳಿಗೆ ಶೂ ತೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಿಚ್ಚನ ಸರಳತೆಗೆ ಮಕ್ಕಳು ಖುಷಿಯಾಗಿದ್ದಾರೆ. ಕೊನೆಗೆ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡು ಅವರಿಗೆ ಮತ್ತಷ್ಟು ಖುಷಿ ನೀಡಿದ್ದಾರೆ.