ಟೊಮೆಟೋ ಸಾರು ಮಾಡುವವರು ಹುಷಾರು!

ಗುರುವಾರ, 29 ಜೂನ್ 2017 (11:52 IST)
ಬೆಂಗಳೂರು: ಟೊಮೆಟೊ ನಮ್ಮ ಪ್ರತಿ ನಿತ್ಯದ ಅಡುಗೆಗೆ ಬೇಕೇ ಬೇಕು. ಆದರೆ ಇನ್ನು ಕಿಲೋಗಟ್ಟಲೆ ಟೊಮೆಟೊ ಖರೀದಿಸುವ ಮೊದಲು ದರ ಕೇಳಿ ನೋಡಿ.

 
ಹೌದು. ಟೊಮೆಟೊ ಮಾರಾಟಗಾರರಿಗೆ ಸಿಹಿಯಾಗಿದ್ದರೆ ಗ್ರಾಹಕರಿಗೆ ಖಾರವಾಗಿದೆ. ಟೊಮೆಟೋ ದರ ಗಣನೀಯವಾಗಿ ಏರಿಕೆಯಾಗಿದೆ. ಕೆ.ಜಿ. ಗೆ ಹದಿನೈದೋ ಇಪ್ಪತ್ತೋ ರೂ. ಒಳಗೆ ಸಿಗುತ್ತಿದ್ದ ಟೊಮೆಟೋ ಇದೀಗ 40 ರೂ.ಗೆ ಏರಿಕೆಯಾಗಿದೆ.

ಬೆಲೆಯಿಲ್ಲದೇ ಕಂಗೆಟ್ಟಿದ ವ್ಯಾಪಾರಿಗಳು ಖುಷ್ ಆಗಿದ್ದರೆ, ಬೆಳ್ಳಂ ಬೆಳಿಗ್ಗೆ ಟೊಮೆಟೋ ಖರೀದಿಗೆಂದು ಬಂದ ಗ್ರಾಹಕರು ದರ ಕೇಳಿ ಹೌಹಾರುತ್ತಿದ್ದಾರೆ. ಬೆಳೆ ಕಡಿಮೆಯಾಗಿರುವುದರಿಂದ ದರ ಗಗನಕ್ಕೇರಿದೆ. ದೆಹಲಿಯಲ್ಲಂತೂ ಟೊಮೆಟೋ ದರ 60 ರಿಂದ 70 ಕೆ.ಜಿ. ಗೆ ಏರಿಕೆಯಾಗಿದೆ. ಪೂರೈಕೆ ಕಡಿಮೆಯಾದ ಹಿನ್ನಲೆಯಲ್ಲಿ ಈ ದರ ವ್ಯತ್ಯಾಸವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ