ಬೆಂಗಳೂರಿನಲ್ಲಿ ಬೋಯಿಂಗ್ ತಾಂತ್ರಿಕ ಕೇಂದ್ರ

ಗುರುವಾರ, 26 ಜನವರಿ 2017 (10:55 IST)
ಪ್ರಮುಖ ವೈಮಾನಿಕ ತಾಂತ್ರಿಕ, ಉಪಕರಣಗಳ ತಯಾರಿ ಕಂಪೆನಿ ಬೋಯಿಂಗ್ ಬೆಂಗಳೂರು ನಗರದಲ್ಲಿ ಇಂಜಿನಿಯರಿಂಗ್ ತಾಂತ್ರಿಕ ಕೇಂದ್ರವನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ ಗ್ರೆಗ್ ಹಿಸ್ಲಾಪ್ ಕಂಪೆನಿ ಬಗ್ಗೆ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿದಿಸಿದ್ದಾರೆ.
 
ಗ್ರೆಗ್ ಮಾತನಾಡುತ್ತಾ,  ಭಾರತದ ಇಂಜಿನಿಯರಿಂತ ನೈಪುಣ್ಯತೆಯನ್ನು ಸಮರ್ಥವಾಗಿ ಬಳಸಿಕೊಂಡು ಹೊಸ ಆವಿಷ್ಕಾರಿಸಲು ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಕೇಂದ್ರದಲ್ಲಿ ಏರ್ಪಡಿಸಲಾಗಿದೆ ಎಂದಿದ್ದಾರೆ.
 
ಪ್ರಮುಖ ತಾಂತ್ರಿಕ ಪರಿಜ್ಞಾನವನ್ನು ಶೀಘ್ರವಾಗಿ ಬಳಸಿಕೊಂಡು ವಿಶ್ವದರ್ಜೆಯ ವೈಮಾನಿಕ ಉಪಕರಣಗಳನ್ನು ಈ ಕೇಂದ್ರದಲ್ಲಿ ಸ್ಥಾಪಿಸುವುದು ಕಂಪೆನಿ ಗುರಿ ಎಂದು ತಿಳಿಸಿದ್ದಾರೆ. ವಿಶ್ವವಿಖ್ಯಾತ ಬೋಯಿಂಗ್ ಸಂಸ್ಥೆಯ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಗಿವುದು ಹೆಮ್ಮೆಯ ವಿಷಯ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ