ಹೊಸ ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್. ನಿಂದ ಬಂಪರ್ ಆಫರ್

ಸೋಮವಾರ, 3 ಡಿಸೆಂಬರ್ 2018 (12:43 IST)
ಬೆಂಗಳೂರು : ದೇಶದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿ ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ವೊಂದನ್ನು ಬಿಡುಗಡೆ ಮಾಡಿದೆ.


ಕೆಲ ದಿನಗಳ ಹಿಂದಷ್ಟೆ  300ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಶುರು ಮಾಡಿದ್ದ ಬಿ.ಎಸ್‌.ಎನ್‌.ಎಲ್. ಇದೀಗ 299 ರೂಪಾಯಿಯ ಹೊಸ ಪ್ಲಾನ್ ಶುರುಮಾಡಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. ಹಾಗೂ ಗ್ರಾಹಕರಿಗೆ 8Mbps ವೇಗದ ನೆಟ್ ಸಿಗಲಿದೆ. 45 ಜಿಬಿ FUP ಲಿಮಿಟ್ ಲಭ್ಯವಾಗಲಿದೆ. ಪ್ರತಿ ದಿನ 1.5 ಜಿಬಿ ಡೇಟಾ ಮುಗಿದ ಮೇಲೆ ವೇಗ 1Mbps ಗೆ ಇಳಿಯಲಿದೆ. 299 ರೂಪಾಯಿ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಆದರೆ ಬಿ.ಎಸ್‌.ಎನ್‌.ಎಲ್. ನ ಹಳೆ ಗ್ರಾಹಕರು ಈ ಪ್ಲಾನ್ ಲಾಭ ಪಡೆಯಲು ಸಾಧ್ಯವಿಲ್ಲ. ಹೊಸ ಗ್ರಾಹಕರಿಗೆ ಮಾತ್ರ ಈ ಪ್ಲಾನ್ ಲಭ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ