ತನ್ನ 186 ಹಾಗೂ 187 ಯೋಜನೆಯ ಎಸ್ಟಿವಿ ವೋಚರ್ ನವೀಕರಿಸಿದ ಬಿ.ಎಸ್‌.ಎನ್‌.ಎಲ್

ಭಾನುವಾರ, 29 ಸೆಪ್ಟಂಬರ್ 2019 (09:58 IST)
ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿ.ಎಸ್‌.ಎನ್‌.ಎಲ್ ಗ್ರಾಹಕರನ್ನು ಆಕರ್ಷಿಸಲು ತನ್ನ 186 ಹಾಗೂ 187 ಯೋಜನೆಯ ಎಸ್ಟಿವಿ ವೋಚರ್ ನವೀಕರಿಸಿದೆ.
ಈ ಮೊದಲು ಬಿ.ಎಸ್‌.ಎನ್‌.ಎಲ್ ತನ್ನ 186 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಡೇಟಾ ನೀಡುತ್ತಿತ್ತು. ಆದರೆ ಇನ್ಮುಂದೆ 3 ಜಿಬಿ ಡೇಟಾ ಸಿಗಲಿದೆ. ಹಾಗೆ 250 ನಿಮಿಷ ಉಚಿತ ಕರೆ ಸೌಲಭ್ಯ ಸಿಗಲಿದೆ. ನೀವು ಯಾವುದೇ ನೆಟ್ವರ್ಕ್ ಗೆ ಉಚಿತವಾಗಿ ಕರೆ ಮಾಡಬಹುದು. ಹಾಗೆ ಪ್ರತಿ ದಿನ ಈ ಪ್ಲಾನ್ ನಲ್ಲಿ 100 ಎಸ್‌ ಎಂ ಎಸ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಇನ್ನು 187 ರೂಪಾಯಿ ಪ್ಲಾನ್ ನಲ್ಲಿ ಕೂಡ 2 ಜಿಬಿ ಬದಲು ಪ್ರತಿ ದಿನ 3 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ, 250 ನಿಮಿಷ ಉಚಿತ ಕರೆ, ಪ್ರತಿ ದಿನ 100 ಎಸ್‌ಎಂಎಸ್ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ