ಗ್ರಾಹಕರಿಗಾಗಿ 56 ರೂ.ಗಳ ಹೊಸ ಪ್ಲಾನ್ ಶುರು ಮಾಡಿದ ಬಿ.ಎಸ್‌.ಎನ್‌.ಎಲ್

ಸೋಮವಾರ, 13 ಮೇ 2019 (07:23 IST)
ಬೆಂಗಳೂರು : ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಇದೀಗ STV46 ಬಂದ್ ಮಾಡಿ 56 ರೂಪಾಯಿಯ ಹೊಸ ಯೋಜನೆಯನ್ನು  ಶುರು ಮಾಡಿದೆ.




ಬಿ.ಎಸ್‌.ಎನ್‌.ಎಲ್.  ಕಂಪೆನಿ ಈ ಮೊದಲು  46 ರೂ.ಗಳ ಪ್ಲಾನ್ ನನ್ನು ಶುರು ಮಾಡಿದ್ದು ಈ ಪ್ಲಾನ್ ನಲ್ಲಿ ಪ್ರತಿ ದಿನ 1ಜಿಬಿ ಡೇಟಾ ಲಭ್ಯವಾಗುತ್ತಿದ್ದು, ಇದು 2 ದಿನಗಳ ಮಾನ್ಯತೆ ಹೊಂದಿತ್ತು. ಆದರೆ ಇದೀಗ ಕಂಪನಿ STV46 ಬಂದ್ ಮಾಡುವ ಘೋಷಣೆ ಮಾಡಿ, ಅದರ ಬದಲು 56 ರೂಪಾಯಿಗಳ ಹೊಸ ಪ್ಲಾನ್ ಶುರು ಮಾಡಿದೆ.


56 ರೂಪಾಯಿ ಹೊಸ ಯೋಜನೆ ಮೇ 13ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಗ್ರಾಹಕರಿಗೆ ಈ 56 ರೂಪಾಯಿ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ 14 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ