ಈ ಸಂಖ್ಯೆಗೆ ಕರೆ ಮಾಡಿ ರಿಲಯನ್ಸ್ ಜಿಯೋ ಸಿಮ್ ಪಡೆಯಿರಿ

ಶನಿವಾರ, 24 ಸೆಪ್ಟಂಬರ್ 2016 (18:32 IST)
ಮೊಬೈಲ್ ಬಳಕೆದಾರರು ರಿಲಯನ್ಸ್ ಜಿಯೋ ಸಿಮ್ ಖರೀದಿಸಲು ಬಯಸಿ ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಅಥವಾ ರಿಲಯನ್ಸ್ ಡಿಜಿಟಲ್ ಎಕ್ಸ್‌ಪ್ರೆಸ್ ಮಳಿಗೆಗೆ ಭೇಟಿ ನೀಡಿ ಬೇಡಿಕೆ ಹೆಚ್ಚಾಗಿದ್ದರಿಂದ ಸಿಮ್ ದೊರೆಯದೇ ನಿರಾಶರಾಗಿರಬಹುದು.  
 
ಅದಾಗ್ಯೂ,  ನಿಮಗೆ ಜಿಯೋ ಸಿಮ್ ಖರೀದಿಸುವ ಸುಲಭ ಮಾರ್ಗವನ್ನು ತಿಳಿಯಿರಿ.
 
ನಿಮ್ಮ ಮೊಬೈಲ್ ಫೋನ್‌ನಿಂದ 1800-200-200-2 ಈ ಸಂಖ್ಯೆಗೆ ಕರೆ ಮಾಡಿ
 
ನಿಮ್ಮ ಫೋನ್‌ಗೆ ಎಸ್‌ಎಂಎಸ್ ಬರುವವರೆಗೆ ನಿರೀಕ್ಷಿಸಿ. ಎಸ್‌ಎಂಎಸ್ ಬಂದ ನಂತರ ಅದರಲ್ಲಿರುವ ಲಿಂಕ್ ಕ್ಲಿಕ್ ಮಾಡಿದಾಗ ಪ್ಲೇಸ್ಟೋರ್‌‌ ಕಾಣಿಸುತ್ತದೆ. ಅಲ್ಲಿರುವ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿ.
 
ಡೌನ್‌ಲೋಡ್ ಮಾಡಿದ ನಂತರ ಇನ್‌ಸ್ಟಾಲ್ ಮಾಡಿ. ತದನಂತರ ಮೈ ಜಿಯೋ ಆಪ್ ಓಪನ್ ಮಾಡಿ.
 
ಆಪ್ ಓಪನ್ ಮಾಡಿದಾಗ ಗೆಟ್ ಜಿಯೋ ಸಿಮ್ ಬ್ಯಾನರ್‌ ಮೇಲೆ ಕ್ಲಿಕ್ ಮಾಡಿ. 
 
ಎಗ್ರಿ ಎನ್ನುವುದನ್ನು ಕ್ಲಿಕ್ ಮಾಡಿ ಮತ್ತು ಗೆಟ್ ಜಿಯೋ ಸಿಮ್ ಆಫರ್‌ಗೆ ಕ್ಲಿಕ್ ಮಾಡಿ. ನಂತರ ಮೆನುಗೆ ತೆರಳಿ ನಿಮ್ಮ ಲೋಕೇಶನ್ ಆಯ್ಕೆ ಮಾಡಿ.
 
ನಂತರ ನೆಕ್ಸ್ಟ್‌ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುವ ಆಫರ್ ಕೋಡ್ ಕ್ಲಿಕ್ ಮಾಡಿ. 
 
ಆಫರ್ ಕೋಡ್ ತೆಗೆದುಕೊಂಡು ನಿಮ್ಮ ಐಡಿ ಪ್ರೂಫ್, ಫೋಟೋ, ವಿಳಾಸದ ದಾಖಲೆಗಳೊಂದಿಗೆ ರಿಲಯನ್ಸ್ ಸ್ಟೋರ್‌ಗೆ ಹೋಗಿ. ಅಲ್ಲಿ ನಿಮ್ಮ ದಾಖಲೆಗಳ ಪರಿಶೀಲನೆ ನಂತರ ಜಿಯೋ ಸಿಮ್ ಪಡೆಯಬಹುದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ