ಉದ್ಯಮಿ ವಿಜಯ್ ಮಲ್ಯ ವಿರುದ್ಧ ಕ್ರಮಕ್ಕೆ ಮುಂದಾದ ಸಿಬಿಐ

ಸೋಮವಾರ, 21 ನವೆಂಬರ್ 2016 (19:07 IST)
ಮುಂಬೈ ಕೋರ್ಟ್ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ, ಲಂಡನ್‌ ಸರಕಾರಕ್ಕೆ ಮನವಿ ಸಲ್ಲಿಸಿದ ಸಿಬಿಐ ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಿದೆ.
 
ಕೇಂದ್ರ ಸರಕಾರ ಇಂಗ್ಲೆಂಡ್ ಪ್ರಧಾನಿ ಥೇರೆಸಾ ಮೇ ಅವರೊಂದಿಗೆ ಚರ್ಚೆ ನಡೆಸಿದ್ದು, ಮಾರ್ಚ್ 2 ರಂದು ಲಂಡನ್‌ಗೆ ಪರಾರಿಯಾಗಿರುವ ಮಲ್ಯ ಅವರನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದೆ. 
 
ಮುಂಬೈನ ವಿಶೇಷ ನ್ಯಾಯಾಲಯದಿಂದ ಮಲ್ಯರನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಅನುಮತಿ ಪಡೆದಿರುವ ಸಿಬಿಐ ಅಧಿಕಾರಿಗಳು, ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆದು. ಇಂಗ್ಲೆಂಡ್‌ನ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದ ಅನುಮತಿ ಪಡೆದ ನಂತರವಷ್ಟೆ ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
 
ಕಳೆದ 10 ತಿಂಗಳಿನಿಂದ ಸಿಬಿಐ ಮತ್ತು ಇಡಿ ಇಲಾಖೆ ಮಲ್ಯಗೆ ಅನೇಕ ನೋಟಿಸ್‌ಗಳನ್ನು  ಜಾರಿಗೊಳಿಸಿದೆ. ಆದಾಗ್ಯೂ ಅವರು ತನಿಖೆಗೆ ಹಾಜರಾಗಿಲ್ಲ. ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಲಂಡನ್‌ನಿಂದ ಗಡಿಪಾರು ಮಾಡಿ ದೇಶಕ್ಕೆ ಕರೆ ತಂದು ಶಿಕ್ಷಿಸಬೇಕು ಎನ್ನುವುದು ಕೇಂದ್ರ ಸರಕಾರದ ನಿಲುವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ