ಯುಪಿಐ ಪಾವತಿ ಮಿತಿಯಲ್ಲಿ ಹೊಸ ಬದಲಾವಣೆ: ವಿವರಗಳಿಗೆ ಇಲ್ಲಿ ನೋಡಿ

Krishnaveni K

ಸೋಮವಾರ, 16 ಸೆಪ್ಟಂಬರ್ 2024 (14:59 IST)
ನವದೆಹಲಿ: ಯುಪಿಐ ಮುಖಾಂತರ ಹಣ ಪಾವತಿ ವಹಿವಾಟಿನ ಮಿತಿಯಲ್ಲಿ ಬದಲಾವಣೆಯಾಗಿದ್ದು ಇಂದಿನಿಂದ ಬದಲಾವಣೆ ಜಾರಿಯಲ್ಲಿರಲಿದೆ. ಹೊಸ ಬದಲಾವಣೆ ಏನು ಎಂಬ ವಿವರಗಳಿಗೆ ಇಲ್ಲಿ ನೋಡಿ.
 

ಮೂರು ರೀತಿಯ ಯುಪಿಐ ಪಾವತಿಗಳ ಮಿತಿಯನ್ನು ಇದುವರೆಗೆ ಇದ್ದ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಯುಪಿಐ ಮೂಲಕ ಹಣ ವ್ಯವಹಾರ ನಡೆಸುವಾಗ 1 ಲಕ್ಷ ರೂ.ವರೆಗೆ ಮಾತ್ರ ಹಣ ಪಾವತಿ ಮಾಡಲು ಮಿತಿಯಿದೆ. ಆದರೆ ಇದೀಗ ಈ ಕೆಲವು ಕಾರಣಗಳಿಗೆ ಹಣ ಪಾವತಿ ಮಾಡುವಾಗ 5 ಲಕ್ಷ ರೂ.ವರೆಗೆ ಮಿತಿ ಏರಿಕೆ ಮಾಡಲಾಗಿದೆ.

ಐದು ಲಕ್ಷ ಪಾವತಿ ವಿನಾಯ್ತಿಯಿರುವ ಹಣ ಪಾವತಿಗಳು:
ತೆರಿಗೆ ಪಾವತಿ ಮಾಡಲು
ಆಸ್ಪತ್ರೆಗೆ ಪಾವತಿ
ಐಪಿಒ ಪಾವತಿ
ಆರ್ ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್
ಶಿಕ್ಷಣ ಸಂಸ್ಥೆಗಳಿಗೆ ಪಾವತಿ

ಇವಿಷ್ಟು ಪಾವತಿಗಳಿಗೆ 1 ಲಕ್ಷದ ಬದಲಾಗಿ ಒಮ್ಮೆಗೆ 5 ಲಕ್ಷದವರೆಗೆ ಪಾವತಿ ಮಾಡಲು ಅವಕಾಶವಿರಲಿದೆ. ಈ ಹೊಸ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ. ಚೆಕ್ ಅಥವಾ ಕಾರ್ಡ್ ಹೊರತಾಗಿ ಯುಪಿಐ ಮೂಲಕವೇ ನೀವು ಇವಿಷ್ಟು ಕಾರಣಗಳಿಗೆ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಪಾವತಿಗಳನ್ನು ಮಾಡಬಹುದಾಗಿದೆ. ನಿಯಮದ ಪ್ರಕಾರ ಈಗ ಮಿತಿ ಹೆಚ್ಚಿಸಲಾಗಿದೆಯಾದರೂ ಅಂತಿಮವಾಗಿ ಆಯಾ ಬ್ಯಾಂಕ್ ಗಳ ನಿಯಮಗಳಿಗೆ ಅನುಸಾರವಾಗಿಯೇ ಪಾವತಿ ಮಿತಿಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ