ನವದೆಹಲಿ: ಇಂದಿನಿಂದ ಯುಪಿಐ ಐಡಿಯಲ್ಲಿ ಈ ಬದಲಾವಣೆಗಳಿದ್ದರೆ ಪಾವತಿ ಸಾಧ್ಯವಾಗದು. ಆ ಬದಲಾವಣೆ ಏನೆಂದು ಇಲ್ಲಿದೆ ವಿವರ.
ಇತ್ತೀಚೆಗಿನ ದಿನಗಳಲ್ಲಿ ಸುಲಭವಾಗಿ ಪಾವತಿ ಮಾಡಲು ಎಲ್ಲರೂ ಯುಪಿಐ ಮೊರೆ ಹೋಗಿದ್ದಾರೆ. ಆದರೆ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಕೆಲವೊಂದು ಬದಲಾವಣೆ ಮಾಡಿ ಸುತ್ತೋಲೆ ಹೊರಡಿಸಿದೆ.
ಇನ್ನು ಮುಂದೆ ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕಾರವಾಗುವುದಿಲ್ಲ ಎಂದು ಪ್ರಕಟಣೆ ನೀಡಲಾಗಿದೆ.ಯುಪಿಐ ಐಡಿಯಲ್ಲಿ @,$,#,^,%, * ನಂತಹ ಯಾವುದೇ ಚಿಹ್ನೆಗಳನ್ನು ಬಳಸುವಂತಿಲ್ಲ. ಒಂದು ವೇಳೆ ಈ ರೀತಿ ಚಿಹ್ನೆಯಿರುವ ಯುಪಿಐ ಐಡಿ ಇದ್ದರೆ ಪೇಮೆಂಟ್ ಸ್ವೀಕಾರವಾಗುವುದಿಲ್ಲ ಎಂದು ಪ್ರಕಟಣೆ ನೀಡಲಾಗಿದೆ. ಇಂದಿನಿಂದ ಯುಪಿಐ ಐಡಿಯಲ್ಲಿ 0-9 ಮತ್ತು ವರ್ಣಮಾಲೆ A-Z ನ್ನು ಮಾತ್ರ ಸೇರಿಸಲು ಅವಕಾಶವಿರುತ್ತದೆ.
ಯುಪಿಐ ಪಾವತಿಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹಲವು ವಂಚನೆಗಳು ಕಂಡುಬರುತ್ತಿವೆ. ಇದೀಗ ಈ ಬದಲಾವಣೆಯ ಮೂಲಕ ವಂಚನೆಗಳಿಗೆ ಕಡಿವಾಣ ಹಾಕಿ ಹೆಚ್ಚು ವಿಶ್ವಾಸಾರ್ಹ ಪಾವತಿ ಮಾಧ್ಯಮವಾಗಿ ಮಾಡುವುದು ಗುರಿಯಾಗಿದೆ.