5 ರೂಪಾಯಿ ನಾಣ್ಯದ ಬಗ್ಗೆ ಈ ವದಂತಿಗಳನ್ನು ನಂಬಬೇಡಿ

Krishnaveni K

ಮಂಗಳವಾರ, 17 ಡಿಸೆಂಬರ್ 2024 (09:44 IST)
Photo Credit: X
ನವದೆಹಲಿ: ವದಂತಿಗಳನ್ನು ನಂಬಿ 10 ರೂಪಾಯಿ ಕಾಯಿನ್ ಸದ್ದಿಲ್ಲದೇ ಮೂಲೆ ಸೇರಿತ್ತು. ಇದೀಗ 5 ರೂಪಾಯಿ ನಾಣ್ಯದ ಸರದಿ. ಈ ಕಾಯಿನ್ ಬಗ್ಗೆಯೂ ಈಗ ವದಂತಿ ಹರಿದಾಡುತ್ತಿದೆ.
 

5 ರೂಪಾಯಿ ಕಾಯಿನ್ ನ್ನೂ ಆರ್ ಬಿಐ ಹಿಂಪಡೆಯುತ್ತಿದೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. 5 ರೂಪಾಯಿಯ ಬೆಳ್ಳಿ ಬಣ್ಣದ ದಪ್ಪ ನಾಣ್ಯಗಳನ್ನು ಆರ್ ಬಿಐ ಹಿಂಪಡೆಯಲಿದೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಕಾರಣಕ್ಕೆ ಈಗ 5 ರೂಪಾಯಿ ನಾಣ್ಯಗಳನ್ನು ಪಡೆಯಲೂ ಜನ ಹಿಂದೆ ಮುಂದೆ ನೋಡುವಂತಾಗಿದೆ.

ಆದರೆ ಅಸಲಿಗೆ ಇದುವರೆಗೆ ಆರ್ ಬಿಐ ಇಂತಹದ್ದೊಂದು ಆದೇಶ ಇದುವರೆಗೆ ನೀಡಿಲ್ಲ. ಹೀಗಾಗಿ ಸದ್ಯಕ್ಕಂತೂ 5 ರೂಪಾಯಿ ನಾಣ್ಯಗಳು ಯಥಾವತ್ತು ಚಾಲ್ತಿಯಲ್ಲಿರಲಿದೆ. ಅಂತಹ 5 ರೂಪಾಯಿ ನಾಣ್ಯಗಳನ್ನು ತಯಾರಿಸಲು ಹೆಚ್ಚು ಖರ್ಚು ಬೀಳುತ್ತಿದೆ ಎಂಬ ಕಾರಣಕ್ಕೆ ರದ್ದು ಮಾಡಲಾಗುತ್ತಿದೆ ಎಂಬ ಸುದ್ದಿಗಳಿವೆ. ಆದರೆ ಅದನ್ನು ಆರ್ ಬಿಐ ಅಧಿಕೃತವಾಗಿ ಹೇಳಿಲ್ಲ.

ಈ ಹಿಂದೆ 10 ರೂಪಾಯಿ ಕಾಯಿನ್ ಬಗ್ಗೆಯೂ ಇದೇ ರೀತಿ ವದಂತಿಗಳು ಹಬ್ಬಿತ್ತು. 10 ರೂಪಾಯಿ ಕಾಯಿನ್ ಗಳಿಗೆ ಬೆಲೆ ಇಲ್ಲ, ಇದು ನಿಷೇಧವಾಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ 10 ರೂಪಾಯಿ ಕಾಯಿನ್ ಗಳನ್ನು ಯಾರೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಕ್ರಮೇಣ ಈಗ 10 ರೂಪಾಯಿ ಕಾಯಿನ್ ಗಳ ಚಲಾವಣೆಯೇ ಕಡಿಮೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ