ಮೇಸೇಜ್ ಮಾಡುವುದರೊಂದಿಗೆ ಮೊಬೈಲ್ ಚಾರ್ಜ್ ಮಾಡಿ

ಭಾನುವಾರ, 26 ನವೆಂಬರ್ 2017 (17:54 IST)
ಇಲ್ಲಿಯವರೆಗೆ ಬಿಕನಿಯಿಂದ ಟೀ-ಶರ್ಟ್‌ವರೆಗೆ ಮೊಬೈಲ್ ಚಾರ್ಜ್ ಮಾಡುವ ಬಹುತೇಕ ವರದಿಗಳು ಬಹಿರಂಗವಾಗಿವೆ. ಆದರೆ, ಮೊದಲ ಬಾರಿಗೆ ಮೇಸೇಜ್‌ಗಳನ್ನು ಕಳುಹಿಸುವುದರಿಂದ ಮೊಬೈಲ್ ಚಾರ್ಜ್ ಆಗುವ ವ್ಯವಸ್ಥೆ ಬಹಿರಂಗವಾಗಿದೆ.
 
ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿ ಮತ್ತು ಆರ್‌ಎಂಐಟಿ ಯುನಿವರ್ಸಿಟಿಯ ಸಂಶೋಧಕರು, ಈ ಮೊಬೈಲ್‌ನಲ್ಲಿ ಫಿಜೋಇಲೆಕ್ಟ್ರಿಕ್ ನ್ಯಾನೋ ಫಿಲ್ಮ್‌ ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಫಿಜೋಇಲೆಕ್ಟ್ರಿಕ್ ನ್ಯಾನೋ ಫಿಲ್ಮ್‌ ತಂತ್ರಜ್ಞಾನದಿಂದಾಗಿ ಮೊಬೈಲ್‌ನಲ್ಲಿ ನಿಧಾನಗತಿಯಿಂದ ವಿದ್ಯುತ್ ತರಂಗಗಳಾಗಿ ಪರಿವರ್ತಿತವಾಗುತ್ತವೆ. ನಿಧಾನಗತಿಯ ವಿದ್ಯುತ್ ತರಂಗಗಳಿಂದಾಗಿ ಮೊಬೈಲ್ ಫೋನ್ ಚಾರ್ಜ್ ಆಗುತ್ತಾ ಸಾಗುತ್ತದೆ. ಮೊಬೈಲ್‌ನಲ್ಲಿ ಟಚ್ ಸ್ಕ್ರೀನ್‌ಗೆ ಟಚ್ ಮಾಡುವುದರೊಂದಿಗೆ ಅಥವಾ ಮೇಸೇಜ್‌ ಮಾಡುವುದರಿಂದ ಮೊಬೈಲ್ ಚಾರ್ಜ್ ಆಗುತ್ತದೆ. ಶೀಘ್ರದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಸಂಶೋಧಕ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ