ಪ್ಯಾಂಟ್‌ ಜೇಬಿನಲ್ಲಿಯೇ ಸ್ಫೋಟಗೊಂಡ ಮೊಬೈಲ್: ಯುವಕನ ಗುಪ್ತಾಂಗಕ್ಕೆ ಗಂಭೀರ ಗಾಯ (ವಿಡಿಯೋ ನೋಡಿ)

ಸೋಮವಾರ, 6 ನವೆಂಬರ್ 2017 (18:49 IST)
ಮೊಬೈಲ್ ಫೋನ್ ಕೇವಲ ಚಾರ್ಜ್ ಮಾಡುವಾಗ ಮಾತ್ರ ಸ್ಫೋಟಗೊಳ್ಳುತ್ತದೆ ಎನ್ನುವುದು ನಮ್ಮೆಲ್ಲರಿಗೆ ಗೊತ್ತಿದೆ. . ಆದರೆ, ಮೊಬೈಲ್ ನಿಮ್ಮ ಜೇಬಿನಲ್ಲಿರುವಾಗ ಕೂಡಾ ಸ್ಫೋಟಗೊಳ್ಳುತ್ತದೆ ಎನ್ನುವುದನ್ನು ಮರೆಯಬೇಡಿ.
ನಗರದ ನಿವಾಸಿಯೊಬ್ಬ ಎಂಐ ನೋಟ್ 4 ಮೊಬೈಲ್ ಜೇಬಿನಲ್ಲಿಟ್ಟುಕೊಂಡಿದ್ದ. ಜೇಬಿನಲ್ಲಿಯೇ ಮೊಬೈಲ್ ಸ್ಫೋಟಗೊಂಡು ಆತನ ತೊಡೆ ಮತ್ತು ಗುಪ್ತಾಂಗ ಸುಟ್ಟು ಗಂಭೀರವಾದ ಗಾಯಗಳಾದ ಘಟನೆ ವರದಿಯಾಗಿದೆ.   
 
ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿನ ಸಿದ್ದಪುರದಲ್ಲಿ ಘಟನೆ ಸಂಭವಿಸಿದ್ದು, ಗಾಯಗೊಂಡವರು ಹನುಮೇಶ್ ಹರಿಜನ್ ಎಂದು ಗುರುತಿಸಲಾಗಿದೆ. 
 
ಕೆಲ ದಿನಗಳ ಹಿಂದೆ ಹನುಮೇಶ್ ಆನ್‌ಲೈನ್‌ನಲ್ಲಿ ಮೊಬೈಲ್ ಫೋನ್ ಖರೀದಿಸಿದ್ದನು. ಇಂದು ಬೆಳಿಗ್ಗೆ ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಮೊಬೈಲ್‌ನ್ನು ತನ್ನ ಪ್ಯಾಂಟ್‌ ಜೇಬಿನಲ್ಲಿರಿಸಿಕೊಂಡಿದ್ದಾನೆ. ಏತನ್ಮಧ್ಯೆ ಜೇಬಿನಲ್ಲಿಯೇ ಮೊಬೈಲ್ ಫೋನ್ ಸ್ಫೋಟಗೊಂಡು ಗಾಯಗೊಂಡಿದ್ದಾನೆ. ಆತನ ತೊಡೆ ಮತ್ತು ಗುಪ್ತಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಆತನನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಯುವಕನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ