ಐಫೋನ್‌ ಕಂಪೆನಿಗೆ ಯಾವುದೇ ರಿಯಾಯಿತಿ ಕೊಡಲ್ಲ

ಮಂಗಳವಾರ, 7 ಫೆಬ್ರವರಿ 2017 (10:21 IST)
ಭಾರತದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಾಪಿಸಲು ಮುಂದಾಗಿರುವ ಆ್ಯಪಲ್ ಕಂಪೆನಿಗೆ ರಿಯಾಯಿತಿ ನೀಡುವ ಕುರಿತು ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೈಗಾರಿಕಾ ನಿಯಮ ಮತ್ತು ಉತ್ತೇಜನ ಮಂಡಳಿ (ಡಿಐಪಿಪಿ) ಕಾರ್ಯದರ್ಶಿ ರಮೇಶ್ ಅಭಿಷೇಕ್ ಸೋಮವಾರ ತಿಳಿಸಿದ್ದಾರೆ.
 
‘ರಿಯಾಯಿತಿ ನೀಡುವ ಮೂಲಕ ಸಹಾಯ ಮಾಡುವಂತೆ ಆ್ಯಪಲ್ ಕಂಪೆನಿ ಕೋರಿದೆ. ಈ ಕುರಿತು ಸಂಬಂಧಪಟ್ಟ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ನಿರ್ಧಾರ ತಿಳಿಸುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಯಾರೂ ಅಂತಿಮ ನಿರ್ಧಾರ ತಿಳಿಸಿಲ್ಲ. ನಾವು ಈಗಲೂ ಅವರ ಸಂಪರ್ಕದಲ್ಲಿದ್ದೇವೆ’ ಎಂದು ರಮೇಶ್ ಅಭಿಷೇಕ್ ಹೇಳಿದ್ದಾಾರೆ.
 
ಭಾರತದಲ್ಲಿ ಉತ್ಪಾದಿಸುವ ಎಲ್ಲ ಕೈಗಾರಿಕೆಗಳನ್ನು ಕೇಂದ್ರ ಸರಕಾರ ಬೆಂಬಲಿಸುತ್ತದೆ. ಆದರೆ ಒಂದು ಕಂಪೆನಿಗೆ ಸೀಮಿತವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ರಮೇಶ್ ಅಭಿಷೇಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ